'ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಮಾಸ್ಟರ್ ತರಬೇತಿ' ಕಾರ್ಯಾಗಾರ

'ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಮಾಸ್ಟರ್ ತರಬೇತಿ' ಕಾರ್ಯಾಗಾರ


ಕುಂದಾಪುರ: 'ಜಲಸಿರಿ ಯೋಜನೆ' ಪುರಸಭೆ ಕುಂದಾಪುರ ಇವರ ಸಹಯೋಗದಲ್ಲಿ 'ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ  ಮಾಸ್ಟರ್ ತರಬೇತಿ' ಕಾರ್ಯಾಗಾರವು ಡಿ.19 ರಂದು ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದ ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕುಂದಾಪುರ ಪುರಸಭೆ ಉಪಾಧ್ಯಕ್ಷೆ ವನಿತಾ ಎಸ್. ಬಿಲ್ಲವ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಪುರಸಭೆ ಸದಸ್ಯ ಚಂದ್ರಶೇಖರ್ ಖಾರ್ವಿ ವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲಲಿತಾ, ಆರೋಗ್ಯ ನಿರೀಕ್ಷಣಾಧಿಕಾರಿ ಕೌಶಿಕ್, ಸಹಾಯಕ ಅಭಿಯಂತರರಾದ ಸುದರ್ಶನ್ ನಲವಾಡೆ, ಸಮುದಾಯ ಅಭಿವೃದ್ಧಿ ಯೋಜನೆಯ ಸಹಾಯಕ ಮಾಲತೇಶ್ ಎಮ್.ಹೆಚ್. ಶಾ ಕನ್ಸಲ್ಟೆಂಟನ ಸಮಾಲೋಚಕ ಪಿ.ವಿ. ಸುರೇಶ್  ಭಾಗವಹಿಸಿದ್ದರು.

ಸಮುದಾಯ ಅಭಿವೃದ್ಧಿ ಯೋಜನೆಯ ಸಹಾಯಕರಾದ ಮಾಲತೇಶ್ ಎಮ್.ಹೆಚ್. ಅವರು ನೀರು ಮತ್ತು ನೈರ್ಮಲ್ಯದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಅಂಗನವಾಡಿ ಕಾರ್ಯಕರ್ತೆ ಪ್ರೇಮ ಪಟೇಲ್ ಸ್ವಾಗತಿಸಿದರು. ತಂಡದ ನಾಯಕಿ ಜ್ಯೋತಿ ಆರ್. ಶೆಟ್ಟಿ  ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article