ಡಿ.5 ರಂದು ಬಾಂಗ್ಲಾದೇಶದಲ್ಲಿ ಹಿಂದು ವಿರೋಧಿ ಕ್ರಮ ಖಂಡಿಸಿ ಪ್ರತಿಭಟನೆ

ಡಿ.5 ರಂದು ಬಾಂಗ್ಲಾದೇಶದಲ್ಲಿ ಹಿಂದು ವಿರೋಧಿ ಕ್ರಮ ಖಂಡಿಸಿ ಪ್ರತಿಭಟನೆ


ಮಂಗಳೂರು: ಬಾಂಗ್ಲಾದೇಶದಲ್ಲಿ ಹಿಂದುಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರ, ಅಹಿತಕರ ಘಟನೆಗಳು ಹಾಗೂ ಚಿನ್ಮಯ ಕೃಷ್ಣ ಪ್ರಭು ದಾಸ್ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ ಡಿ.5 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಅವರು ಇಂದು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿಸಿ ನೀಡಿ, ಅಂದು ಬೆಳಿಗ್ಗೆ 10 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿಯಿಂದ ಮೆರವಣಿಗೆ ಸಾಗಿ ಪುರಭವನದ ಎದುರಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಇಸ್ಕಾನ್‌ನ ಚಿನ್ಮಯ ಕೃಷ್ಣ ಪ್ರಭು ದಾಸ್ ಅವರು ಅನೇಕ ಸಂದರ್ಬದಲ್ಲಿ ಬಾಂಗ್ಲಾದೇಶಕ್ಕೆ ನೆರವಿಗೆ ಬಂದಿದ್ದು, ಅವರ ಮೇಲೆ ಕೇಸು ದಾಖಲಿಸಿ ಅವರನ್ನು ಬಂಧಿಸಿ ಹಿಂದೂಗಳಿಗೆ ಅಲ್ಲಿ ಜಾಗ ಇಲ್ಲ ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇಲ್ಲಿ ದೇವಸ್ಥಾನಗಳಿಗೆ ಹಾನಿ ಮಾಡುತ್ತಿದ್ದಾರೆ. ಕ್ರಿಕೇಟ್ ಆಟಗಾರರು, ಸಂಗೀತಗಾರರು ಹಾಗೂ ಮತ್ತಿತರ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಹಿಂದುಗಳನ್ನು ಗುರಿಯಾಗಿಸಿ ಈ ಕೇತ್ಯವನ್ನು ನಡೆಸುತ್ತಿದ್ದಾರೆ. ಹಿಂದುಗಳನ್ನು ಬಾಂಗ್ಲಾದಿಂದ ಓಡಿಸುವ ಹುನ್ನಾರ ಇದಾಗಿದ್ದು, ಇದನ್ನು ಅಲ್ಲಿಯ ಪ್ರಧಾನಿಗಳು ಬೆಂಬಲಿಸುತ್ತಿದ್ದಾರೆ ಇದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಈ ಪ್ರತಿಭಟನೆಗೆ ಮಠಾಧೀಶರುಗಳು, ಧಾರ್ಮಿಕು ಮುಖಂಡರು, ಬಿಜೆಪಿಯ ಶಾಸಕರು, ಸಂಸದರು ಹಾಗೂ ಎಲ್ಲಾ ಮುಖಂಡರು ಬೆಂಬಲ ನಡೆಯಲಿದೆ. ಪ್ರತಿಭಟನೆಗೆ ಬೇಕಾದ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ ಎಂದರು.

ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ಬಾಂಗ್ಲಾದೇಶವನ್ನು ವಿಭಜನೆ ಮಾಡಿ ಸ್ವಾತಂತ್ರ ತಂದುಕೊಟ್ಟಿದೆ. ಆ ಬಳಿಕ ನಮ್ಮ ದೇಶದಿಂದ ಅಭಿವೃದ್ಧಿಗೆ ಅಪಾರ ನೆರವನ್ನು ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ ಸಂದರ್ಭದಲ್ಲಿ ಅಪಾರ ನೆರವನ್ನು ನೀಡಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರುಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಸಂಜಯ್ ಪ್ರಭು, ಅರೂಣ್ ಶೇಟ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article