ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ: ದಂಡ
Friday, December 13, 2024
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿದ ಆರೋಗ್ಯ ಇಲಾಖೆ ಮತ್ತು ಪೊಲೀಸರ ತಂಡವು, 51 ಪ್ರಕರಣಗಳನ್ನು ದಾಖಲಿಸಿ, ದಂಡ ವಿಧಿಸಿದೆ.
ನಗರದ ಫಳ್ನೀರ್, ಅತ್ತಾವರ, ಹಂಪನಕಟ್ಟೆ, ಆರ್.ಟಿ.ಓ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿದ ತಂಡವು ಹೋಟೆಲ್, ಕೆಫೆ, ಟೀ ಸ್ಟಾಲ್, ಅಂಗಡಿ ವಠಾರ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಸಿಗರೇಟ್ ಸೇದುತ್ತಿದ್ದವರಿಗೆ ತಲಾ ರೂ.200 ವರೆಗೆ ದಂಡ ವಿಧಿಸಿದೆ.
ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಕಾಯಿದೆ(ಕೋಪ್ಟಾ) ಅನ್ವಯ, ಸಿಗರೇಟ್ ಇಡೀ ಪ್ಯಾಕ್ ಮಾರಾಟ ಮಾಡಬೇಕಿದ್ದು, ಸಿಂಗಲ್ ಸಿಗರೇಟ್ ಮಾರಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಸಿಂಗಲ್ ಸಿಗರೇಟ್ ಮಾರಾಟ ಮಾಡುತ್ತಿದ್ದ ಅಂಗಡಿ, ಕೆಫೆಗಳಿಗೆ ದಂಡ ವಿಧಿಸಲಾಯಿತು. ಅದೇ ರೀತಿ ಶಾಲಾ ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಸೇರಿದಂತೆ ಧೂಮಪಾನ ವಸ್ತುಗಳನ್ನು ಮಾರುತ್ತಿದ್ದ ಅಂಗಡಿಗಳಿಗೆ ದಂಡ ವಿಧಿಸಲಾಯಿತು.