ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಕಾಮತ್

ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಕಾಮತ್


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 45ನೇ ಪೋರ್ಟ್ ವಾರ್ಡ್ ನ ಪಟೇಲ್ ಕಾಂಪೌಂಡ್ ಹೊಯ್ಗೆ ಬಜಾರ್ ಅತ್ತಾವರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 2022-23 ನೇ ಸಾಲಿನ 16.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಂತ ಅರ್ಸುಲ ಅಂಗನವಾಡಿ ಕೇಂದ್ರವನ್ನು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟಿಸಿದರು 

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಳೆದ ಹಲವಾರು ವರ್ಷಗಳಿಂದ ಸ್ವಂತ ಅಂಗನವಾಡಿ ಕಟ್ಟಡಕ್ಕೆ ಇಲ್ಲಿನ ನಾಗರಿಕರಿಂದ ಬೇಡಿಕೆ ಇದ್ದು, ಶ್ರೀಮತಿ ಸುಜಾತಾ ಶೆಟ್ಟಿಯವರ ನಿರಂತರ ಪ್ರಯತ್ನವಂತೂ ಶ್ಲಾಘನೀಯ. ಅವರೆಲ್ಲರ ಬೇಡಿಕೆಗನುಸಾರವಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಶೇಷ ಪ್ರಯತ್ನದ ಮೂಲಕ 16.50 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿತ್ತು. ಅದರ ಫಲವಾಗಿ ಕಟ್ಟಡ ನಿರ್ಮಾಣಕ್ಕಾಗಿ ಜಾಗವೇ ಇರದಿದ್ದ ಇಲ್ಲಿ ಹತ್ತಾರು ವಿಘ್ನಗಳ ನಡುವೆಯೂ ಹಲವರ ಶ್ರಮದಿಂದ ಸುಂದರ ಅಂಗನವಾಡಿ ಕಟ್ಟಡ ತಲೆ ಎತ್ತಿ ನಿಂತಿದೆ. ಇಲ್ಲಿನ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

ಸ್ಥಳೀಯ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯ ತೋರದೇ ಸಹಕರಿಸಿದ ಶಾಸಕ ಕಾಮತ್ ಅವರಿಗೆ ಸಮಸ್ತ ವಾರ್ಡಿನ ಜನತೆಯ ಪರವಾಗಿ ಧನ್ಯವಾದಗಳನ್ನು ಸಮರ್ಪಿಸಿದರು.

ಮೇಯರ್ ಮನೋಜ್ ಕುಮಾರ್, ಫಾದರ್ ಆಲ್ಫ್ರೆಡ್ ಪಿಂಟೋ, ಎಂ.ಎಲ್.ಸಿ ಐವನ್ ಡಿ'ಸೋಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಉಸ್ಮಾನ್, ನಿರೂಪಣಾಧಿಕಾರಿ ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಸಿಸ್ಟರ್ ಸೆಲೀನ್, ದೈವರಾಜ ಭಗವಾನ್ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಗಂಗಾಧರ್,  ಉದ್ಯಮಿ ರಾಜೇಶ್ ಪುನಿಯ, ಅಂಗನವಾಡಿ ಕೇಂದ್ರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಉಮೇಶ್ ಶೆಟ್ಟಿ, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಕವಿತಾ, ಅಂಗನವಾಡಿ ಕಾರ್ಯಕರ್ತೆಯರು, ಸೇರಿದಂತೆ ಅನೇಕ ಸ್ಥಳೀಯರು ಉಪಸ್ಥಿತರಿದ್ದರು.







Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article