ವಿಶ್ವ ಕೊಂಕಣಿ ನಾಟಕೋತ್ಸವ

ವಿಶ್ವ ಕೊಂಕಣಿ ನಾಟಕೋತ್ಸವ

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ 2024-25 ಸಾಲಿಗೆ ‘ಡಾ. ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಪುರಸ್ಕಾರ 2025’ ಹಾಗೂ  ‘ಡಾ. ಪಿ ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರ 2025' ಈ ಎರಡೂ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಶ್ವ ಕೊಂಕಣಿ ನಾಟಕೋತ್ಸವ ಫೆ.೮ರಂದು ನಡೆಯಲಿದೆ.

ಪ್ರಶಸ್ತಿಯು  ತಲಾ ಒಂದು ಲಕ್ಷ ರೂಪಾಯಿಗಳ ಸಮ್ಮಾನ ಧನ ಮತ್ತು ಫಲಕಗಳನ್ನು ಹೊಂದಿದೆ.

ರಂಗಶ್ರೇಷ್ಟ ಪುರಸ್ಕಾರಕ್ಕಾಗಿ ಅರುವತ್ತು ವರ್ಷಕ್ಕಿಂತ ಹಿರಿಯ, ಕೊಂಕಣಿ ಮಾತೃಭಾಷಿಕ,  ರಂಗಭೂಮಿಯ ಏಳಿಗೆಗಾಗಿ ಸಿನೆಮಾ-ನಾಟಕಗಳಲ್ಲಿ ನಟನೆ, ನಿರ್ದೇಶನ, ನಾಟಕ ರಚನೆಯಂತಹಾ ಕ್ಷೇತ್ರಗಳಲ್ಲಿ ನಿರಂತರ ದುಡಿಮೆ ಹಾಗೂ ಸಮರ್ಪಣಾ ಭಾವದೊಂದಿಗೆ ಜೀವಮಾನದ ಸೇವೆ ನೀಡಿರುವ ರಂಗಕರ್ಮಿಗಳಿಂದ ನೇರವಾಗಿ ಅಥವಾ ಹಿತೈಷಿ ಕಲಾಸಕ್ತರಿಂದ ಪ್ರಸ್ತಾವನೆಗಳನ್ನು  ಆಹ್ವಾನಿಸಲಾಗಿದೆ. 

ಅದೇ ರೀತಿ  ಭಾಷಾಂತರ ಕ್ಷೇತ್ರದಲ್ಲಿ, ವಿಶೇಷವಾಗಿ ಕೊಂಕಣಿ ಸಾಹಿತ್ಯ ಕೃತಿಗಳನ್ನು ಇತರ ಭಾಷೆಗಳಿಗೆ ಅತ್ಯುತ್ತಮ ವಾಗಿ ಅನುವಾದಿಸಿ  ಸೇವೆ ಸಲ್ಲಿಸಿರುವವರಿಂದ ನೇರವಾಗಿ ಅಥವಾ ಹಿತೈಷಿ ಸಾಹಿತ್ಯಾಸಕ್ತರಿಂದ   ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. 

ಅರ್ಜಿದಾರರು ಮೊದಲು www.vishwakonkani.org ನಲ್ಲಿ ತಮ್ಮ  ಹೆಸರು ನೊಂದಾಯಿಸಿಕೊಂಡು, ಅನಂತರ ವಿವರವಾದ ಪ್ರಸ್ತಾವನಾ ಅರ್ಜಿಯನ್ನು, ಅಧ್ಯಕ್ಷರು, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು  575016 ಇಲ್ಲಿಗೆ 2025 ಜನವರಿ 10ನೇ ತಾರೀಕಿನೊಳಗಾಗಿ ಅಂಚೆ ಮೂಲಕ ಕಳುಹಿಸಿಕೊಡುವುದು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article