
ಕದ್ರಿಪಾರ್ಕ್ನಲ್ಲಿ ಬೃಹತ್ ದ್ರಾಕ್ಷಾ ರಸ (ವೈನ್) ಮೇಳ
ಮಂಗಳೂರು: ರತ್ನಾ’ಸ್ ವೈನ್ ಗೇಟ್ ಹಾಗೂ ಶೂಲಿನ್ ಗ್ರೂಪ್ ಮಂಗಳೂರು ಪ್ರಾಯೋಜಕತ್ವದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ (ಸರ್ಕಾರಿ ಸ್ವಾಮ್ಯದ ಸಂಸ್ಥೆ), ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಡಿ.7 ಹಾಗೂ 8ರಂದು ಕದ್ರಿಪಾರ್ಕ್ ಮಂಗಳೂರಿನಲ್ಲಿ ದ್ರಾಕ್ಷಾ ರಸ ಪ್ರದರ್ಶನ, ಮಾರಾಟ ಹಾಗೂ ಬೃಹತ್ ವೈನ್ ಮೇಳ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಹಿತದೃಷ್ಟಿಯಿಂದ ಬೆಳೆಗೆ ಉತ್ತಮ ಬೇಡಿಕೆ ಹಾಗೂ ಬೆಲೆ ಸಿಗುವ ಉದ್ದೇಶಕ್ಕಾಗಿ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ, ಕರ್ನಾಟಕ ದ್ರಾಕ್ಷಾ ರಸ ಮಂಡಳಿ ಹಾಗೂ ಕರ್ನಾಟಕದ ವೈನರಿಗಳ ಸಹಕಾರದೊಂದಿಗೆ ದ್ರಾಕ್ಷಾ ರಸದ ಉತ್ಪಾದನೆ, ದಾಸ್ತಾನು ಹಾಗೂ ದ್ರಾಕ್ಷಾ ರಸದ ಪೇಯವನ್ನು ಸವಿಯುವ ವಿಧಾನ ಮಾತ್ರವಲ್ಲ, ಇದು ಉತ್ತಮ ಆರೋಗ್ಯಕರ ಪಾನೀಯವಾಗಿರುವುದರಿಂಧ ಇದರ ಬಗ್ಗೆ ಸೂಕ್ತ ಮಾಹಿತಿ ನೀಡಲಾಗುತ್ತದೆ. ‘ಪ್ರದರ್ಶನ-ಸವಿಯುವಿಕೆ-ಮಾರಾಟ’ ಎಂಬ ಘೋಷವಾಕ್ಯದೊಂದಿಗೆ ವೈನ್ ಮೇಳ ಆಚರಿಸಲ್ಪಡುತ್ತಿದ್ದು ದ್ರಾಕ್ಷಾ ರಸ ಉತ್ಪಾದಕ ಸಂಸ್ಥೆಗಳ ಮೂಲಕ ಅತ್ಯಾಕರ್ಷಕ ದರ ಹಾಗೂ ಅತ್ಯುತ್ತಮ ಕೊಡುಗೆಗಳೊಂದಿಗೆ ಮಾರಾಟವನ್ನು ಏರ್ಪಡಿಸಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.