ಮಂಗಳೂರಿನಲ್ಲಿ ಉಚ್ಚ ನ್ಯಾಯಲಯದ ಪೀಠ ಸ್ಥಾಪನೆ ಸಿಎಂಗೆ ಮನವಿ

ಮಂಗಳೂರಿನಲ್ಲಿ ಉಚ್ಚ ನ್ಯಾಯಲಯದ ಪೀಠ ಸ್ಥಾಪನೆ ಸಿಎಂಗೆ ಮನವಿ


ಮಂಗಳೂರು: ಮಂಗಳೂರಿನಲ್ಲಿ ಉಚ್ಚ ನ್ಯಾಯಲಯದ ಪೀಠ ಸ್ಥಾಪನೆ ಮಾಡುವ ಬಗ್ಗೆ ಹೋರಾಟ ಸಮಿತಿಯ ಸಂಚಾಲಕರರು ಹಾಗೂ ವಿಧಾನ ಪರಿಷತ್‌ನ ಸದಸ್ಯ ಐವನ್ ಡಿ’ಸೋಜ ಅವರ ನೇತೃತ್ವದಲ್ಲಿ ವಿಧಾನ ಸಭೆಯ ಸಭಾದಕ್ಷ ಯು.ಟಿ. ಖಾದರ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿಯವರಿಗೆ, ಮಂಗಳೂರು ವಕೀಲರ ಸಂಘದ ಪರವಾಗಿ ಮನವಿಯನ್ನು ಸಲ್ಲಿಸಲಾಯಿತು. 

ಈ ಬಗ್ಗೆ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಮತ್ತು ಹಿರಿಯ ವಕೀಲ ಎಂ.ಪಿ. ನೊರೋನ್ಹಾ ಅವರು ಕರಾವಳಿಯಲ್ಲಿ ಉಚ್ಛ ನ್ಯಾಯಲಯದ ಸಂಚಾರಿ ಪೀಠವನ್ನು ಜರೂರಾಗಿ ಸ್ಥಾಪಿಸುವ ಬಗ್ಗೆ ಮನವರಿಕೆ ಮಾಡಿದರು. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರು ಉಚ್ಚ ನ್ಯಾಯಲಯದ ನ್ಯಾಯಧೀಶರೊಂದಿಗೆ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುದಾಗಿ ತಿಳಿಸಿರುತಾರೆ. 


ನಿಯೋಗದಲ್ಲಿ ಶಾಸಕರುಗಳಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಕಿಶೋರ್ ಕುಮಾರ್,. ಮಂಜುನಾಥ್ ಭಂಡಾರಿ, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ವಕೀಲರದ ಮೋನಪ್ಪ ಭಂಡಾರಿ, ಹಾಗೂ ಹಿರಿಯ ವಕೀಲರಾದ ಟಿ. ನಾರಾಯಣ ಪೂಜಾರಿ, ಯಶವಂತ ಮರೋಳಿ, ಉಪಾಧ್ಯಕ್ಷರಾದ ಸುಜಿತ್ ಕುಮಾರ್, ಬ೦ಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿ’ಕೊಸ್ತಾ, ಶಾಲಿನಿ, ಸುಮನಾ ಶರಣ್, ಸಂತೋಷ್ ಕುಮಾರ್, ದಿನಕರ್ ಶೆಟ್ಟಿ, ರಾಘವೇಂದ್ರ ರಾವ್, ಪ್ರಮೋದ್ ಕೆರ್ವಾಶೆ, ಜಗದೀಶ್ ಕೆ.ಆರ್., ವಿಜಯ್ ಮಹಾತೇಶ್ ಸತೀಶ್ ಕುಮಾರ್, ವೀರೇಂದ್ರ ಸಿದ್ದಕಟ್ಟೆ ಉಪಸ್ಥಿತರಿದ್ದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article