ಆಳ್ವಾಸ್‌ನಲ್ಲಿ ಗಾಂಧಿ ವಿಚಾರ ಶಿಬಿರ-ಆದರ್ಶದ 5 ಗುಣಗಳನ್ನು ಮೈಗೂಡಿಸಿಕೊಂಡವರವರು ಮಹಾತ್ಮ ಗಾಂಧೀಜಿ: ನಾಡೋಜ ಡಾ. ವೂಡೇ ಪಿ. ಕೃಷ್ಣ

ಆಳ್ವಾಸ್‌ನಲ್ಲಿ ಗಾಂಧಿ ವಿಚಾರ ಶಿಬಿರ-ಆದರ್ಶದ 5 ಗುಣಗಳನ್ನು ಮೈಗೂಡಿಸಿಕೊಂಡವರವರು ಮಹಾತ್ಮ ಗಾಂಧೀಜಿ: ನಾಡೋಜ ಡಾ. ವೂಡೇ ಪಿ. ಕೃಷ್ಣ


ಮೂಡುಬಿದಿರೆ: ದ್ವೇಶಿಸುವವರನ್ನು ಪ್ರೀತಿಸುವ, ಸಮಾಜದಿಂದ ಹೊರಗುಳಿದವರನ್ನು ಒಟ್ಟುಗೂಡಿಸುವ, ಕ್ಷಮಿಸುವ, ತಪ್ಪನ್ನು ಒಪ್ಪಿಕೊಳ್ಳುವ ಗುಣ  ಹಾಗೂ ಸರಳತೆ ಈ 5 ಆದರ್ಶ ಗುಣಗಳಿಂದ ವಿಶ್ವಕ್ಕೆ ನಾಯಕನೆನೆಸಿಕೊಂಡವರು ಮಹಾತ್ಮ ಗಾಂಧೀಜಿ ಎಂದು ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳು’ ಎಂಬ ವಿಷಯದ ಕುರಿತು ಕುವೆಂಪು ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ಗಾಂಧಿ ವಿಚಾರ ಶಿಬಿರ-2024ನ್ನು ಉದ್ಘಾಟಿಸಿ ಮಾತನಾಡಿದರು.


ಭಾರತದ ನಿಜವಾದ ಶಕ್ತಿ ಅಧ್ಯಾತ್ಮ. ಅಧ್ಯಾತ್ಮವನ್ನು ರಾಜಕೀಯ ಚಳವಳಿಗೆ ಬಳಸಿಕೊಂಡು ಬಹುಜನರನ್ನು ಸಂಘಟಿಸಿ ದೇಶವನ್ನು ರೂಪಿಸಿದ ನಾಯಕ ಗಾಂಧೀಜಿ.   

ಇಂದು ನಮ್ಮ ದೇಶ ಉಳಿಯಬೇಕಾದರೆ ಮತ್ತು ಬೆಳೆಯಬೇಕಾದರೆ ಗಾಂಧಿ ಯುವ ಮನಸ್ಕರನ್ನು ಸಿದ್ಧ ಪಡಿಸಬೇಕಾಗಿದೆ ಎಂದ ಅವರು ಗಾಂಧಿ ಅವರನ್ನು ಅನುಕರಿಸುವ ಅವಶ್ಯಕತೆಯಿಲ್ಲ ಅನುಸರಿಸಿದರೆ ಸಾಕು. ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡಿಕೊಂಡರೆ ಅದೇ ಆದರ್ಶ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ರಾಜಕೀಯದಲ್ಲಿದ್ದುಕೊಂಡು ಅಧ್ಯಾತ್ಮಕ್ಕೂ ಒತ್ತು ನೀಡಿದವರು ಮಹಾತ್ಮರು. ವರ ಅಹಿಂಸೆ, ಸತ್ಯಾಗ್ರಹ ಹಾಗೂ ಸರಳತೆ ಎಂಬ ಮೂಲಮಂತ್ರಗಳನ್ನು ಅರ್ಥೈಸಿಕೊಂಡು ನಾವು ಅದನ್ನು ಅನುಸರಿಸಿದರೆ ಜಗತ್ತಿನಲ್ಲಿ ಯಾವುದೇ ಯುದ್ಧ, ಭ್ರಷ್ಟಚಾರ, ಅಥವಾ ಪರಿಸರ ಮಾಲಿನ್ಯವಾಗಲಿ ಸಂಭವಿಸುವುದಿಲ್ಲ. ಮಹಾತ್ಮರು ಅತೀ ಕಡಿಮೆ ಪದಗಳಲ್ಲಿ ದೊಡ್ಡ ಅರ್ಥವನ್ನು ಹುದುಗಿಸಿಟ್ಟಿದ್ದಾರೆ ಇದನ್ನು ಅರ್ಥ ಮಾಡಿಕೊಳ್ಳಬೇಕಾದದು ನಮ್ಮ ಸಾಮರ್ಥ್ಯ ಮತ್ತು ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದರು.


ಪ್ರಸಿದ್ಧ ಕವಯತ್ರಿ ಸವಿತಾ ನಾಗಭೂಷಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಳ್ವಾಸ್ ಕಾಲೇಜು ಪ್ರಾಂಶುಪಾಲ ಡಾ. ಕುರಿಯನ್ ಉಪಸ್ಥಿತರಿದ್ದರು.

ವಿಚಾರ ಶಿಬಿರದ ಸಂಘಟನಾ ಕಾರ್ಯದರ್ಶಿ ಡಾ. ಯೋಗಿಶ್ ಕೈರೋಡಿ ಸ್ವಾಗತಿಸಿದರು. ಮಾಧವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article