ಸ್ವಸ್ತಿ ಶ್ರೀ ಕಾಲೇಜಿನಲ್ಲಿ ಕಾನೂನು ಕಾರ್ಯಗಾರ

ಸ್ವಸ್ತಿ ಶ್ರೀ ಕಾಲೇಜಿನಲ್ಲಿ ಕಾನೂನು ಕಾರ್ಯಗಾರ


ಮೂಡುಬಿದಿರೆ: ಸ್ವಸ್ತಿಶ್ರೀ ವಸತಿ ಪದವಿ ಪೂರ್ವ ಕಾಲೇಜು, ಮೂಡುಬಿದಿರೆ ಅಧಿವಕ್ತಾ ಪರಿಷತ್ ಕರ್ನಾಟಕ–ದಕ್ಷಿಣ ಪ್ರಾಂತ ಮೂಡುಬಿದಿರೆ ಘಟಕದ ವತಿಯಿಂದ  ಸ್ವಸ್ತಿಶ್ರೀ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಕಾರ್ಯಗಾರ ನಡೆಯಿತು.

ಹಿರಿಯ ನ್ಯಾಯವಾದಿ, ಎಂ.ಸಿ.ಎಸ್ ಬ್ಯಾಂಕ್ ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ದೇಶದ ಸಂವಿಧಾನ ಪ್ರಪಂಚದಲ್ಲಿ ಅತೀ ಉತ್ತಮವಾದ ಸಂವಿಧಾನವಾಗಿರುತ್ತದೆ. ಅದು ನಮ್ಮ ದೇಶದ ಶ್ರೇಷ್ಠ ಕಾನೂನು ಆಗಿರುತ್ತದೆ. ಭಾರತದ ಪ್ರಜಾಪ್ರಭುತ್ವ ಸುಗಮವಾಗಿ ಕಾರ್ಯ ನಿರ್ವಹಿಸಲು ಸಂವಿಧಾನದ ಚೌಕಟ್ಟು ಕಾರಣ. ನಮ್ಮ ನೆರೆಯ ರಾಷ್ಟ್ರದಲ್ಲಿ ಕಾನೂನನ್ನು ಪಾಲಿಸದ ಕಾರಣ ಅರಾಜಕತೆಯಿಂದ ಶಾಂತಿ ನೆಮ್ಮದಿ ಬಾಳ್ವೆ ಅಸಾದ್ಯವಾಗಿರುತ್ತದೆ. ಸಂವಿಧಾನ ರಚನೆ ಮತ್ತು ರಕ್ಷಣೆಯಲ್ಲಿ ವಕೀಲರ ಪಾತ್ರ ಹಿರಿದಾಗಿರುತ್ತದೆ. ಸಂವಿಧಾನದಲ್ಲಿ ಜನರಿಗೆ ಕೊಟ್ಟ ಹಕ್ಕು- ಕರ್ತವ್ಯ ಹಾಗೂ ತಿದ್ದುಪಡಿಗಳ ಬಗ್ಗೆ ವಿದ್ಯಾರ್ಥಿಗಳ ಗಮನ ಸೆಳೆದರು. 

ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ಜಯಪ್ರಕಾಶ್ ಭಂಡಾರಿ ಅವರು ಮೋಟಾರು ವಾಹನ ಕಾಯ್ದೆಯ ಬಗ್ಗೆ ಮಾಹಿತಿ ನೀಡಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಾಹನ ಚಾಲಕರು ಸರಿಯಾದ ದಾಖಲೆಗಳಿಲ್ಲದೆ ವಾಹನ ಚಲಿಸುದರಿಂದ ಜೈಲು ಶಿಕ್ಷೆ ಮತ್ತು ದಂಡ ಕಟ್ಟಲು ಬದ್ಧರಾಗಿರುತ್ತಾರೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಅಧಿವಕ್ತಾ ಪರಿಷತ್ ಮೂಡುಬಿದಿರೆ ಘಟಕದ ಅಧ್ಯಕ್ಷ ಎಂ ಕೆ ದಿವಿಜೇಂದ್ರ ಕುಮಾರ್ ವಹಿಸಿದರು. 

ಕಾಲೇಜಿನ ಪ್ರಾಂಶುಪಾಲೆ ಸೌಮಶ್ರೀ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ರೋಹಿತ್ ಅತಿಥಿಗಳನ್ನು ಗೌರವಿಸಿದರು. ಉಪನ್ಯಾಸಕಿ ಸುಜಾತ ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article