
ಆಳ್ವಾಸ್ ವಿರಾಸತ್ನಲ್ಲಿ ಜನೋಪಯೋಗಿ ಸೇವಾ ಸೌಲಭ್ಯಗಳನ್ನು ನೀಡಿದ ಅಂಚೆ ಇಲಾಖೆ
Monday, December 16, 2024
ಮೂಡುಬಿದಿರೆ: ಈ ಬಾರಿಯ ಆಳ್ವಾಸ್ ವಿರಾಸತ್ನಲ್ಲಿ ಪುತ್ತೂರು ವಿಭಾಗದ ಅಂಚೆ ಇಲಾಖೆಯು ಮಳಿಗೆಯನ್ನು ತೆರೆದಿದ್ದು ಇಲ್ಲಿ ಸಾರ್ವಜನಿಕರಿಗೆ ವಿವಿಧ ರೀತಿಯ ಜನೋಪಯೋಗಿ ಸೇವಾ ಸೌಲಭ್ಯಗಳನ್ನು ನೀಡುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ.
30ನೇ ವರ್ಷದ ಆಳ್ವಾಸ್ ವಿರಾಸತ್ನ ಸವಿ ನೆನಪಿಗಾಗಿ ಅಂಚೆ ಇಲಾಖೆಯ ವಿಶೇಷವಾದ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿದೆ ಮತ್ತು ಇನ್ನೂ ಹೆಚ್ಚಿನ ಸೇವಾ ಸೌಲಭ್ಯಗಳನ್ನು ನೀಡಿದ್ದು, ಇದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ.
ನೀಡಿರುವ ಇತರ ಸೇವೆಗಳು:
ಆಧಾರ್ ನೋಂದಣಿ ಮತ್ತು ತಿದ್ದುಪಡಿ-1116, ಭಾವ ಚಿತ್ರದ, ಮೈ ಸ್ಟ್ಯಾಂಪ್-62, ಸಮೂಹ ಅಪಘಾತ ವಿಮೆ-88, ಇಂಡಿಯಾ ಪೋಸ್ಟ್ ಮೊಬೈಲ್ ಬ್ಯಾಂಕಿಂಗ್ ಮತ್ತು ಮರ್ಚೆಂಟ್ ಕಿ ಖ-94, ಅಂಚೆ ಚೀಟಿ ಸಂಗ್ರಹ ಖಾತೆ-13, ಅಂಚೆ ಸಣ್ಣ ಉಳಿತಾಯ ಯೋಜನೆಗಳು-29, ಅಂಚೆ ಜೀವ ವಿಮೆ/ ಗ್ರಾಮೀಣ ಅಂಚೆ ಜೀವ ವಿಮೆ 12, ಸೋಲಾರ್ ಎನ್ರಿಚ್ ಎಲ್ ಇಡಿ ಲ್ಯಾಂಪ್-9, ಅಂಚೆ ಚೀಟಿ, ಪಿಕ್ಚರ್ ಪೋಸ್ಟ್ ಕಾರ್ಡ್, ವಿಶೇಷ ಅಂಚೆ ಲಕೋಟೆ, ರಾಮ ಜನ್ಮ ಭೂಮಿ ಸ್ಮರಣಿಕೆ-ಒಟ್ಟು 1.5 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಅಂಚೆ ಚೀಟಿ ಸಂಗ್ರಹ ಮಾಡುವುದರ ಮೂಲಕ ಸುಮಾರು 1000 ಕ್ಕಿಂತ ಹೆಚ್ಚಿನ ಜನರು ಮಳಿಗೆಯಿಂದ ಖರೀದಿ ಮಾಡಿದ್ದಾರೆ.
ಅಂಚೆ ಇಲಾಖೆಯ ಸಿಬ್ಬಂದಿಗಾದ ಗುರುಪ್ರಸಾದ್ ಮೂಡುಬಿದಿರೆ, ಮಾರುಕಟ್ಟೆ ಅಧಿಕಾರಿ ಪುತ್ತೂರು ವಿಭಾಗದ ನೂತನ್ ಬಂಗೇರ ಸಿಸ್ಟಮ್ ಅಡ್ಮಿನ್ ಪುತ್ತೂರು, ಪ್ರಜ್ವಲ್ ಸಿ.ವಿ. ಶಾಖಾ ಅಂಚೆ ಪಾಲಕರು ಬಾಳಿಲ, ವಿಶ್ವನಾಥ ಎಂ.ಟಿ. ಡಾಕ್ ಸೇವಕ್ ಮೂಡುಬಿದಿರ ಹಾಗೂ ತಾಕೋಡೆ ಶಾಖಾ ಅಂಚೆ ಪಾಲಕ ಶಿವಾನಂದ ಅವರು ಅಂಚೆ ಸೇವಾ ಕೌಂಟರ್ನಲ್ಲಿ ಅವಿರತವಾಗಿ ಶ್ರಮಿಸುವ ಮೂಲಕ ಜನರಿಗೆ ಉತ್ತಮ ಸೇವೆಯನ್ನು ನೀಡಿದ್ದಾರೆ.