ಶ್ರೀ ಕ್ಷೇತ್ರ ತೋಡಾರಿನಲ್ಲಿ ತುಡರಾಯನ ಪಂಥೊಲು

ಶ್ರೀ ಕ್ಷೇತ್ರ ತೋಡಾರಿನಲ್ಲಿ ತುಡರಾಯನ ಪಂಥೊಲು


ಮೂಡುಬಿದಿರೆ: ಬದುಕಿಗೆ ದಾರಿದೀಪವಾಗಿರುವ ನಮ್ಮ ಶ್ರೀಮಂತ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಮತ್ತು ಊರ ಪರವೂರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಆಶಯದೊಂದಿಗೆ  ಶ್ರೀ ಕ್ಷೇತ್ರ ತೋಡಾರು ಶ್ರೀ ಕೊಡಮಣಿತ್ತಾಯ ದೇವಸ್ಥಾನ ಬ್ರಹ್ಮ ಬೈದರ್ಕಳ ಗರಡಿ ಇಲ್ಲಿ ಮೂರನೇ ವರ್ಷದ ತುಡರಾಯನ ಪಂಥೊಲು*  ಎಂಬ ಧಾರ್ಮಿಕ ಸ್ಪರ್ಧಾಕೂಟವನ್ನು ಏರ್ಪಡಿಸಲಾಯಿತು. 

ಚಿಣ್ಣರು, ಕಿರಿಯ ,ಹಿರಿಯ  ಮೂರು ವಿಭಾಗಗಳಲ್ಲಿ ಭಕ್ತಿ ಗೀತೆ, ಭಜನೆ, ರಂಗೋಲಿ, ಹೂ ಕಟ್ಟುವುದು,ಶ್ಲೋಕ ಪಠಣ, ಚಿತ್ರಕಲೆ, ಕ್ಲೆ ಮಾಡೆಲಿಂಗ್, ಹಿಡಿಸೂಡಿ ತಯಾರಿ,ಕಥೆ ಹೇಳುವುದು, ಆಶುಭಾಷಣ,ಶಂಖ ಊದುವುದು ಇತ್ಯಾದಿ ಹನ್ನೆರಡು ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಪ್ತಶಸ್ತಿ ಪತ್ರ,ನಗದು  ಬಹುಮಾನಗಳನ್ನು ವಿತರಿಸಲಾಯಿತು. 

ದಕ್ಶಿಣ ಕನ್ನಡ ಉಡುಪಿ ಜಿಲ್ಲೆಗಳಿಂದ ವಿವಿಧ ಸಂಘ ಸಂಸ್ಥೆಗಳಿಂದ, ವಿದ್ಯಾಸಂಸ್ಥೆಗಳಿಂದ ಸುಮಾರು 600 ವಿದ್ಯಾರ್ಥಿಗಳು ಯುವಕರು ಮಹಿಳೆಯರು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

ಕ್ಷೇತ್ರದ ಧರ್ಮದರ್ಶಿ , ಆನುವಂಶಿಕ ಆಡಳಿತದಾರರಾದ ತೋಡಾರುಗುತ್ತು ವಿಶಾಲಕೀರ್ತಿ ಬಲಿಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕ್ಷೇತ್ರದ ಪ್ರಧಾನ ಪುರೋಹಿತರು ಮಾರೂರು ಖಂಡಿಗ ಶ್ರೀ ರಾಮದಾಸ ಅಸ್ರಣ್ಣರವರು ಶುಭ ಆಶೀರ್ವಚನಗೈದರು. ಊರಿನ ಗುತ್ತು ಮನೆಯವರು, ಹಿರಿಯರು, ಗಣ್ಯರು ಉಪಸ್ಥಿತರಿದ್ದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article