ಸರಕಾರದ ಸವಲತ್ತುಗಳು ರದ್ದು: ಇಲಿ ಪಾಷಾಣ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಸಾವು
Thursday, December 12, 2024
ಮುಲ್ಕಿ: ಇಲಿ ಪಾಷಾಣ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ಪಕ್ಷಿಕೆರೆ ಕೊಯ್ಕುಡೆ ನಿವಾಸಿ ಭಾಸ್ಕರ್ ಬಿ. ಕುಲಾಲ್ (56) ಎಂದು ಗುರುತಿಸಲಾಗಿದೆ.
ಮೃತ ಭಾಸ್ಕರ ಕುಲಾಲ್ ಅವರಿಗೆ ಸರಕಾರದ ಯೋಜನೆಗಳಾದ ಬಿಪಿಎಲ್ ಕಾರ್ಡ್, ಕಿಸಾನ್ ಹಣ ರದ್ದು ಹಾಗೂ ಮಗಳಿಗೆ ಸ್ಕಾಲರ್ಶಿಪ್ ಬಾರದ ಹಿನ್ನೆಲೆಯಲ್ಲಿ ಡಿ.2 ರಂದು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಡಿ.12ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಅವರು ಮಂಗಳೂರಿನ ಪತ್ರಿಕೆಯೊಂದರಲ್ಲಿ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಮೃತರ ಪತ್ನಿ ಜಯಶ್ರೀ ನೀಡಿದ ದೂರಿನಂತೆ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.