
'ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳು ಅಣ್ಣ': ಸ್ಟೇಟಸ್ ಹಾಕಿ ಆತ್ಮಹತ್ಯೆ
Tuesday, December 17, 2024
ಸುಳ್ಯ: ಓಂ ಶಾಂತಿ ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳು ಅಣ್ಣ ಎಂದು ವಾಟ್ಸಾಪ್‌ಗೆ ಸ್ಟೇಟಸ್ ಹಾಕಿ ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ಸುಳ್ಯದಲ್ಲಿ ನಡೆದಿದೆ. ಮೃತರನ್ನು ಸುಳ್ಯದ ಮಂಡೆಕೋಲು ಶಿವಾಜಿನಗರ ನಿವಾಸಿ ಪುರುಷೋತ್ತಮ್ (30) ಎಂದು ಗುರುತಿಸಲಾಗಿದೆ. ಪುರುಷೋತ್ತಮ್ ಆತ್ಮಹತ್ಯೆ ಮಾಡುವ ಮುನ್ನ ವಾಟ್ಸಾಪ್ ನಲ್ಲಿ ‘ ಓಂ ಶಾಂತಿ ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳು ಅಣ್ಣ’ ಎಂದು ಸ್ಟೇಟಸ್ ಹಾಕಿದ್ದಾರೆ. ಬಳಿಕ ತಮ್ಮ ಮನೆಯ ಸಮೀಪ ಇರುವ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುರುಷೋತ್ತವ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಪತ್ನಿ ಹಾಗೂ ಇಬ್ಬರ ಮಕ್ಕಳನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.