ಎಸ್.ಡಿ.ಎಂ ಸ್ವಾಯುತ್ತ ಕಾಲೇಜು: ಮನಃಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ರಜತ ಮಹೋತ್ಸವ

ಎಸ್.ಡಿ.ಎಂ ಸ್ವಾಯುತ್ತ ಕಾಲೇಜು: ಮನಃಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ರಜತ ಮಹೋತ್ಸವ

ರಾಜ್ಯದ ಜ್ಞಾನವಿಕಾಸ ಕೇಂದ್ರಗಳ ‘ಗೆಳತಿ’ ಕಾರ್ಯಕ್ರಮದಡಿ ಮಹಿಳೆಯರಿಗೆ ಆಪ್ತ ಸಲಹೆ, ಸಮಾಲೋಚನೆ: ಶ್ರದ್ಧಾಅಮಿತ್


ಉಜಿರೆ: ಶ್ರೀ ಕ್ಷೇತ್ರ ರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ 30 ಜ್ಞಾನವಿಕಾಸ ಕೇಂದ್ರಗಳ ಏಳು ‘ಗೆಳತಿ’ ಕೇಂದ್ರಗಳಲ್ಲಿ ಮಹಿಳೆಯರಿಗೆ ಆಪ್ತಸಲಹೆ ಮತ್ತು ಆಪ್ತಸಮಾಲೋಚನೆ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸಿ ಸಕಾಲಿಕ ಮಾಹಿತಿ, ಮಾರ್ಗದರ್ಶನದೊಂದಿಗೆ ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಲಾಗುತ್ತಿದೆ. ತನ್ಮೂಲಕ ಮಹಿಳಾಸಬಲೀಕರಣಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಬೆಂಗಳೂರಿನ ಎಸ್.ಡಿ.ಎಂ. ಕ್ಷೇಮವನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರದ್ಧಾಅಮಿತ್ ಹೇಳಿದರು.

ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯುತ್ತ ಕಾಲೇಜಿನ ಮನಃಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ರಜತ ಮಹೋತ್ಸವ ಸಮಾರಂಭವನ್ನು ಇಂದ್ರಪ್ರಸ್ಥ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ರಕ್ಷಣೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.


ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿತರಗತಿಯ ಪ್ರಥಮ ತಂಡದ ವಿದ್ಯರ‍್ಥಿನಿಯಾದ ಶ್ರದ್ಧಾಅಮಿತ್ ಗ್ರಾಮೀಣ ಪ್ರದೇಶದಲ್ಲಿ ಮಾದರಿಯಾದ ಹಾಗೂ ಉತ್ತಮಗ್ರಂಥಾಲಯ, ಪ್ರಯೋಗಾಲಯ ಮತ್ತು ಪ್ರಾಧ್ಯಾಪಕ ವೃಂದದವರನ್ನು ಹೊಂದಿರುವ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿದ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ರಜತಮಹೋತ್ಸವ ಸಂದರ್ಭದಲ್ಲಿ ಯೋಜಿಸಿರುವ ಎಲ್ಲಾ 25 ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು. ಗುರುವಂದನಾ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.


ಹಿರಿಯ ಪ್ರಾಧ್ಯಾಪಕಿ ಪ್ರೊ. ಎಂ.ವೈ. ಮಂಜುಳಾ ತಮ್ಮ ಸೇವಾವಧಿಯ ಸವಿ ನೆನಪುಗಳನ್ನು ಸ್ಮರಿಸಿ ವಿಭಾಗದ ಪ್ರಗತಿ, ಸಾಧನೆಯನ್ನು ಶ್ಲಾಘಿಸಿದರು.

ಅಮೇರಿಕಾದ ಮನೋವಿಜ್ಞಾನ ಸಂಸ್ಥೆಯ ನಿರ್ದೇಶಕಿ ಪ್ರೊ. ಕರೋಲ್ ಡಿ. ರಿಫ್ ಮಾತನಾಡಿ, ಭಾರತಕ್ಕೆ ತಮ್ಮ ಪ್ರಥಮ ಭೇಟಿ ಇದಾಗಿದ್ದು ಇಲ್ಲಿನ ಶಿಸ್ತು, ಧರ್ಮ, ಸಂಸ್ಕೃತಿ, ಮಾನವೀಯತೆ, ಪ್ರೀತಿ-ವಿಶ್ವಾಸ, ಅತಿಥಿಸತ್ಕಾರವನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿದರು.


ಉಜಿರೆಯ ಪ್ರಶಾಂತ, ಪ್ರಾಕೃತಿಕ ಪರಿಸರ, ಶೈಕ್ಷಣಿಕ ಸೇವೆ-ಸಾಧನೆ, ಶಿಸ್ತು, ಸೇವೆ ಮತ್ತು ಬದ್ಧತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಅವರು ಮೆಚ್ಚಿ ಅಭಿನಂದಿಸಿದರು. ಸಮಕಾಲೀನ ಸಮಸ್ಯೆಗಳ ಪರಿಹಾರಕ್ಕಾಗಿ ಶಿಕ್ಷಣಸಂಸ್ಥೆಗಳು ಮಡುತ್ತಿರುವ ಸೇವಾಕಾರ್ಯಗಳ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್‌ಚಂದ್ರ ಮಾತನಾಡಿ, ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆಪ್ತಸಲಹೆ, ಮಾರ್ಗದರ್ಶನ ಮೂಲಕ ಜನಸಾಮಾನ್ಯರ ಕೌಟುಂಬಿಕ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸುವ ವಿಶಿಷ್ಠ ವಿಧಾನವನ್ನು ವಿವರಿಸಿದರು.


ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, ಮಾನಸಿಕ ಸಮಸ್ಯೆ ಇಂದು ಜಾಗತಿಕ ಸಮಸ್ಯೆಯಾಗಿದ್ದು ಉತ್ತಮ ಹವ್ಯಾಸಗಳು, ಧನಾತ್ಮಕ ಚಿಂತನೆ ಮತ್ತು ಸೃಜನಾತ್ಮಕ ಚಟುವಟಿಕೆಗಳ ಮೂಲಕ ಪಹರಿಸಬಹುದು ಎಂದರು.

ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಪ್ರೊ. ವಿಶ್ವನಾಥ್ ಪಿ., ಡಾ. ಎಂ.ವೈ. ಮಂಜುಳಾ ಮತ್ತು ಡಾ. ಸುಮಿತ್ ದತ್ತ್ ಉಪಸ್ಥಿತರಿದ್ದರು.

ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಅಶ್ವಿನಿ ಎಸ್. ಶೆಟ್ಟಿ ವಂದಿಸಿ, ಅಲಿಶಾ ಮತ್ತು ಜಾಹ್ನವಿ ಕಾರ್ಯಕ್ರಮ ನಿರ್ವಹಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article