ಉಜಿರೆಯ ಶಶಾಂಕ ಹೆಗಡೆ ‘ವಿದ್ಯಾರತ್ನ ಪ್ರಶಸ್ತಿ’ಗೆ ಆಯ್ಕೆ
Thursday, December 19, 2024
ಉಜಿರೆ: ಉಜಿರೆ ಶ್ರೀ ಧ.ಮಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರ ಪುತ್ರ ಶಶಾಂಕ ಹೆಗಡೆ, ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಅಂಗವಾಗಿ ನೀಡಲಾಗುವ ವಿದ್ಯಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ. 27ರಿಂದ ಮೂರು ದಿನಗಳ ಕಾಲ ನಡೆಯುವ ಹವ್ಯಕ ಸಮ್ಮೇಳನದಲ್ಲಿ ಈ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಮಣಿಪಾಲ ವಿವಿಯಿಂದ ಎಂ.ಟೆಕ್ ಪದವಿಯನ್ನು ಪ್ರಥಮ ಸ್ಥಾನ ಹಾಗೂ ಚಿನ್ನದ ಪದಕದೊಂದಿಗೆ ಯಶಸ್ವಿಯಾಗಿ ಪೂರೈಸಿರುವ ಶಶಾಂಕ, ಇಂಗ್ಲೆಂಡಿನಲ್ಲಿ ಒಂದು ವರ್ಷದ ಎಂಎಸ್ಸಿ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಮಣಿಪಾಲ ವಿವಿಯಿಂದ ಡಬಲ್ ಡಿಗ್ರಿ ಪ್ರಾಜೆಕ್ಟ್ಗೆ ಆಯ್ಕೆಯಾಗಿದ್ದ ಶಶಾಂಕ್, ಇಂಗ್ಲೆಂಡಿನ ಕ್ರಾನ್ಫೀಲ್ಡ್ ವಿವಿಯಲ್ಲಿ ‘ಕಂಪ್ಯೂಟೇಶನಲ್ ಫ್ಲ್ಯೂಯಿಡ್ ಡೈನಾಮಿಕ್ಸ್’ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಅತ್ಯುತ್ತಮ ಗ್ರೇಡ್ನೊಂದಿಗೆ ಪೂರ್ಣಗೊಳಿಸಿದ್ದಾರೆ.