
ಕಾರು ಢಿಕ್ಕಿ: ಮಹಿಳೆ ಮೃತ್ಯು
Saturday, March 22, 2025
ಬಂಟ್ವಾಳ: ರಸ್ತೆ ದಾಟಲೆಂದು ನಿಂತಿದ್ದ ಮಹಿಳೆಯೋರ್ವಳಿಗೆ ಕಾರೊಂದು ಢಿಕ್ಕಿ ಹೊಡೆದ ಘಟನೆ ಶುಕ್ರವಾರ ರಾತ್ರಿ ಪರಂಗಿಪೇಟೆ ಬಳಿ ನಡೆದಿದ್ದು, ಪರಿಣಾಮ ಮಹಿಳೆ ಮೃತಪಟ್ಟರೆ, ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಫರಂಗಿಪೇಟೆ ಸಮೀಪದ 10ನೇ ಮೈಲುಕಲ್ಲು ನಿವಾಸಿ ವಸಂತಿ ಶೆಟ್ಟಿ (52) ಮೃತಪಟ್ಟ ದುರ್ದೈವಿ.
ಮಂಗಳೂರಿನಿಂದ ಬಿ.ಸಿ.ರೋಡು ಕಡೆಗೆ ಬರುತ್ತಿದ್ದ ಕಾರೊಂದು ಢಿಕ್ಕಿ ಹೊಡೆದ ರಭಸಕ್ಕೆ ವಸಂತಿ ಶೆಟ್ಟಿಯವರು ರಸ್ತೆಯಲ್ಲಿ ಹೊರಳುತ್ತಾ ಬಸ್ ನಿಲ್ದಾಣದ ಒಳಗಿನಿಂದ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಈ ದೃಶ್ಯ ಇಲ್ಲಿನ ಸಿಸಿ.ಟಿ.ವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವೈರಲ್ ಆಗಿದೆ. ಮನೆಗೆ ಸಾಮಾಗ್ರಿ ತರಲೆಂದು ಅಂಗಡಿಗೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಲಾರು ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಬಂಟ್ವಾಳ ಟ್ರಾಫಿಕ್ ಪೊಲೀಸರು ಸಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.