
ಕುಳಾಯಿ ಮೀನುಗಾರಿಕಾ ಜೆಟ್ಟಿ: ಕಾಮಗಾರಿ ಮುಂದುವರೆಸಲು ಮನವಿ
Saturday, March 22, 2025
ಮಂಗಳೂರು: ಕುಳಾಯಿಯ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಸಂಬಂಧ ತ್ರಿಸದಸ್ಯರ ಸಮಿತಿ, ಕೇಂದ್ರೀಯ ಜಲ ಮತ್ತು ಶಕ್ತಿ ಸಂಶೋಧನ ಸಂಸ್ಥೆ, ಎನ್‌ಐಟಿ ಕ್ಯಾಲಿಕಟ್‌ನವರು ನೀಡಿರುವ ವರದಿ ಆಧರಿಸಿ ಜೆಟ್ಟಿ ನಿರ್ಮಾಣ ಕಾರ್ಯವನ್ನು ಮುಂದುವರಿಸಲು ಕೋರಿ ನವಮಂಗಳೂರು ಬಂದರು ಪ್ರಾಧಿಕಾರ ರಾಜ್ಯ ಮೀನುಗಾರಿಕಾ ನಿರ್ದೇಶಕರಿಗೆ ಪತ್ರ ಬರೆದಿದೆ.
ಈ ಅತ್ಯಾಧುನಿಕ ಜೆಟ್ಟಿ ಮೂಲಕ ಮೀನುಗಾರ ಸಮುದಾಯಕ್ಕೆ ಗುಣಮಟ್ಟದ ಸೌಲಭ್ಯ ಒದಗಿಸಲು ಉದ್ದೇಶಿಸಿತ್ತು. ಆದರೆ ಕಾಮಗಾರಿಯಲ್ಲಿನ ಬ್ರೇಕ್ವಾಟರ್ ವಿನ್ಯಾಸ, ಅದರ ಜೋಡಣೆಗಳ ಕುರಿತು ಕೆಲವರು ದೂರಿದ್ದರು.
ಈ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಎನ್‌ಐಒ ಗೋವಾ, ಎನ್‌ಐಒಟಿ ಚೆನ್ನೈ ಮತ್ತು ಎನ್ಸಿಸಿಆರ್ ಚೆನ್ನೈ ಪ್ರತಿನಿಧಿಗಳ ಮೂರು ಮಂದಿಯ ಸಮಿತಿ ಅಧ್ಯಯನ ನಡೆಸಿದ್ದು ಯೋಜನೆಯ ಅಲೈನ್ಮೆಂಟ್ನಲ್ಲಿ ಬದಲಾವಣೆ ಮಾಡಿಲ್ಲ ಎಂದು ತಿಳಿಸಿದೆ. ಸಿಡಬ್ಲ್ಯುಪಿಆರ್‌ಎಸ್ ಪುಣೆ ಅವರು ಕುಳಾಯಿ ಮೀನುಗಾರಿಕಾ ಜೆಟ್ಟಿಯ ಹೈಡ್ರಾಲಿಕ್ ಅಧ್ಯಯನ ನಡೆಸಿದ್ದು ಅಲೆಗಳ ಸುರಕ್ಷಿತತೆ ಬಗ್ಗೆಯೂ ಪೂರಕ ವರದಿ ನೀಡಿದ್ದರು.