ಆಳ್ವಾಸ್ ನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ: ರಂಗಗೀತೆ, ಸನ್ಮಾನ, ಉಪನ್ಯಾಸ, ನಾಟಕ ಪ್ರದರ್ಶನ

ಆಳ್ವಾಸ್ ನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ: ರಂಗಗೀತೆ, ಸನ್ಮಾನ, ಉಪನ್ಯಾಸ, ನಾಟಕ ಪ್ರದರ್ಶನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ, ರಂಗ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಮಾರ್ಚ್ 28 ರಂದು ಅಪರಾಹ್ನ 3 ಗಂಟೆಗೆ ವಿದ್ಯಾಗಿರಿಯ ಕಾಮರ್ಸ್ ಬ್ಲಾಕ್ ನಲ್ಲಿರುವ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಏರ್ಪಡಿಸಲಾಗಿದೆ.

ಡಾ. ಎಂ. ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ.ನರಸಿಂಹಮೂರ್ತಿ ಆರ್. ಇವರು 'ಕನ್ನಡ ರಂಗಭೂಮಿಯ ಅವಶ್ಯಕತೆ' ಈ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಹಿರಿಯ ನಾಟಕ ಮತ್ತು ಚಲನಚಿತ್ರ ಕಲಾವಿದರಾದ ಭೋಜರಾಜ ಶೆಟ್ಟಿ ಇವರಿಗೆ ವಿಶ್ವರಂಗ ಸನ್ಮಾನ ನೀಡಿ ಗೌರವಿಸಲಾಗುವುದು.

ನಂತರ ವಿದುಷಿ ಸುಮನಾ ಪ್ರಸಾದ್ ಹಾಗೂ ನೀನಾಸಂ ಕಲಾವಿದೆ ಮಮತಾ ಕಲ್ಮಕಾರು ತಂಡದಿಂದ ಆಯ್ದ ರಂಗಗೀತೆಗಳ  ಗಾಯನ ಮತ್ತು ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯಿಸುವ, ಶಶಿರಾಜ್ ರಾವ್ ಕಾವೂರು ರಚಿಸಿದ, ಜೀವನ್ ರಾಂ ಸುಳ್ಯ ನಿರ್ದೇಶನದ ಏಕಾದಶಾನನ ನಾಟಕ ಪ್ರದರ್ಶನ ನಡೆಯಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ದ.ಕ.ಜಿಲ್ಲಾ ಸಂಚಾಲಕರಾದ ಡಾ| ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article