
ಮೇ 10ರಂದು ನವೋದಯ ಸ್ವ-ಸಹಾಯ ಗುಂಪುಗಳ ರಜತ ಸಂಭ್ರಮ
ಮಂಗಳೂರು: ನವೋದಯ ಗ್ರಾಮಾ ಚಾರಿಟೆಬಲ್ ಟ್ರಸ್ಟ್‌ನ ನವೋದಯ ಸ್ವ-ಸಹಾಯ ಗುಂಪುಗಳ ರಜತ ಸಂಭ್ರಮ ಮೇ 10ರಂದು ಪೂರ್ವಾಹ್ನ 10ಕ್ಕೆ ಗೋಲ್ಡ್ ಫಿಂಚ್ ಸಿಟಿ ಬಂಗ್ರ ಕೂಳೂರಿನಲ್ಲಿ ನಡೆಯಲಿದೆ.
ಸಿಎಂ ಸಿದ್ದರಾಮಯ್ಯ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ನವೋದಯ ಸ್ವ-ಸಹಾಯ ಗುಂಪುಗಳ ರಜತ ಸಂಭ್ರಮ. ವನ್ನು ಉದ್ಘಾಟಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಡಾ ಎಂ. ಎನ್. ರಾಜೇಂದ್ರ ಕುಮಾರ್ ಇಂದು ಇಲ್ಲಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಮಹಾರಾಷ್ಟ್ರ ಸರಕಾರದ ಮುಖ್ಯ ಮಂತ್ರಿ ದೇವೇಂದ್ರ ಫಡ್ನವೀಸ್ ನವೋದಯ ಸ್ವ ಸಹಾಯ ಗುಂಪು ಗಳಿಗಳ ಸದಸ್ಯರಿಗೆ ಸವಲತ್ತುಗಳನ್ನು ವಿತರಿಸಲಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ "ಸಂತೃಪ್ತಿ" ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್ ಸಹಕಾರಿ ಧ್ವಜಾರೋಹಣ ನಡೆಸಲಿದ್ದಾರೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹು ದಾದ ಇಂಧನ ಖಾತೆಯ ಸಚಿವ ಪ್ರಹ್ಲಾದ್ ವಿ ಜೋಶಿ,ಅತ್ಯುತ್ತಮ ನವೋದಯ ಗುಂಪುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ, ನವೋದಯ ಗ್ರಾಮ ವಿಕಾಸ ಚ್ಯಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಡಿ.ವೀರೇಂದ್ರ ಹೆಗ್ಗಡೆ, ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಲಕ್ಷ್ಮಣ ಸಂಗಪ್ಪ ಸವದಿ, ಜಿ.ಟಿ. ದೇವೇಗೌಡ,ಇಪ್ಕೋ ಅಧ್ಯಕ್ಷ ಡಾ. ಉದಯ ಶಂಕರ್ ಅವಸ್ಥಿ, ಅರಬೈಲ್ ಶಿವರಾಂ ಹೆಬ್ಬಾರ್, ವಿ.ಸುನೀಲ್ ಕುಮಾರ್, ಮುರುಗೇಶ್ ನಿರಾಣಿ ಮೊದಲಾದವರು ಉಪಸ್ಥಿತರಿದ್ದರು. ನವೋದಯ ಗುಂಪುಗಳ ರಚನೆ ಮಹಿಳಾ ಸಶಕ್ತತೆಗೆ ಸಹಕಾರಿಯಾಗಿದೆ ಎಂದರು.
ನವೋದಯ ಸ್ವ ಸಹಾಯ ಗುಂಪುಗಳ ಮೂಲಕ ಮಹಿಳಾ ಸ್ವಾವಲಂಬನೆ ಸಾಧಿಸಿರುವ ಸಮಾರು ೫ಲಕ್ಷ ಮಹಿಳೆಯರು ನವೋದಯ ಸ್ವ ಸಹಾಯ ಸಂಘಗಳಲ್ಲಿ ಇದ್ದಾರೆ. ರಾಜ್ಯದ 10 ಜಿಲ್ಲೆಯಲ್ಲಿ 9 ಲಕ್ಷ ನವೋದಯ ಸ್ವ ಸ್ವಹಾಯ ಸಂಘಗಳ ಸದಸ್ಯರಿದ್ದಾರೆ ಹಾಗೂ ಒಂದು ಲಕ್ಷ ಗುಂಪುಗಳಿವೆ. ಈ ಬಾರಿ ದೇಶಕ್ಕೆ ಮಾದರಿಯಾಗಿ ಈ ಸಮಾವೇಶ ನಡೆಯಲಿದೆ. ಸುಮಾರು ಒಂದೂವರೆ ಲಕ್ಷ ನವೋದಯ ಗುಂಪುಗಳ ಸದಸ್ಯರು ಒಂದೇ ಸಮವಸ್ತ್ರದಲ್ಲಿ ಸೇರುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ. ನವೋದಯ ಸ್ವ ಸಹಾಯ ಸಂಘಗಳು ಸಾಮೂಹಿಕ ಹೊಣೆ ಗಾರಿಕೆಯೊಂದಿಗೆ ತಮ್ಮೊಳಗೆ ಸಾಲ ವಿತರಿಸುತ್ತಿವೆ ಚಕ್ರಬಡ್ಡಿ ವಿಧಿಸಲಾಗುತ್ತಿಲ್ಲ. ಸುಮಾರು 3 ಸಾವಿರ ಬಸ್‌ಗಳಲ್ಲಿ ಸದಸ್ಯರು ವಿವಿಧ ಜಿಲ್ಲೆಗಳಿಂದ ರಜತ ಸಂಭ್ರಮಕ್ಕೆ ಆಗಮಿಸಲಿದ್ದಾರೆ, 200 ಸ್ಟಾಲ್‌ಗಳಿರಲಿವೆ ಎಂದು ತಿಳಿಸಿದರು.
ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕರಾದ ಭಾಸ್ಕರ್, ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಿ, ದೇವಿ ಪ್ರಸಾದ್ ಶೆಟ್ಟಿ ಬೆಳಪು, ಕೆ. ಜೈರಾಜ್ ಬಿ. ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ, ನವೋದಯ ಟ್ರಸ್ಟಿಗಳಾದ ಮೇಘರಾಜ್ ಆರ್. ಜೈನ್, ಸುನಿಲ್ ಕುಮಾರ್ ಬಜಗೋಳಿ, ಜಯಪ್ರಕಾಶ್ ತುಂಬೆ, ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.