‘ವೈರಲ್ ಪೋಸ್ಟ್‌ಗಳ ಬಲೆಗೆ ಬೀಳಬೇಡಿ’: ಪೊಲೀಸ್ ಆಯುಕ್ತರು

‘ವೈರಲ್ ಪೋಸ್ಟ್‌ಗಳ ಬಲೆಗೆ ಬೀಳಬೇಡಿ’: ಪೊಲೀಸ್ ಆಯುಕ್ತರು


ಮಂಗಳೂರು: ಅನೇಕ ಯುವಕರು ಅಜ್ಞಾತವಾಗಿ ಸೈಬರ್ ಅಪರಾಧಗಳನ್ನು ಎಸಗುತ್ತಿದ್ದು, ಅವರ ಭವಿಷ್ಯ, ಉದ್ಯೋಗಾವಕಾಶಗಳು ಮತ್ತು ಪ್ರವಾಸ ಅವಕಾಶಗಳು ಹಾಳಾಗುತ್ತಿವೆ. ಹಾಗಾಗಿ ವೈರಲ್ ಪೋಸ್ಟ್‌ಗಳ ಬಲೆಗೆ ಬೀಳಬೇಡಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಯುವಕರಿಗೆ ಎಚ್ಚರಿಕೆ ಕಿವಿಮಾತು ನೀಡಿದ್ದಾರೆ.

ಪೋಸ್ಟ್ ಮಾಡುವ ಮೊದಲು ಯೋಚಿಸಿ..

ಇತ್ತೀಚಿನ ದಿನಗಳಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಫೇಸ್ ಬುಕ್, ಇನ್ ಸ್ಟ್ರಾಗ್ರಾಂ, ವಾಟ್ಸ್ ಆಪ್ ಗುಂಪುಗಳು ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ, ಸುಳ್ಳು, ತಪ್ಪು ಮಾಹಿತಿ ಮತ್ತು ಬೆದರಿಕೆ ಸಂದೇಶ ಹರಡುವ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಕೆಲವರು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿ ಸಮುದಾಯಗಳ ನಡುವೆ ಅಸಮಾಧಾನ ಉಂಟು ಮಾಡಲು ಸುಳ್ಳು ಸುದ್ದಿ ಹರಡಲು ಮತ್ತು ಇತರರನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಗಂಭೀರ ಕಾನೂನು ಉಲ್ಲಂಘನೆಯಾಗಿದ್ದು, ಗಂಭೀರವಾಗಿ ಪರಿಣಿಸುತ್ತಿದ್ದೇವೆ. 

ಕಳೆದ ಒಂದು ವಾರದಲ್ಲಿ 30ಕ್ಕೂ ಅಧಿಕ ಕೋಮು ದ್ವೇಷ ಮತ್ತು ಸುಳ್ಳು ಪೋಸ್ಟ್ಗಳ ವಿರುದ್ಧ ಮಂಗಳೂರು ನಗರ ಪೊಲೀಸ್ ಪ್ರಕರಣ ದಾಖಲಿಸಿಕೊಂಡಿದೆ. ಈ ಪ್ರಕರಣಗಳನ್ನು ಸೆನ್ ಕ್ರೈಂ ಪೊಲೀಸ್ ಠಾಣೆಯ ಎಸಿಪಿ ನೇತೃತ್ವದ ವಿಶೇಷ ತಂಡ ತನಿಖೆ ನಡೆಸುತ್ತಿದೆ ಎಂದವರು ತಿಳಿಸಿದ್ದಾರೆ. 

ನಕಲಿ ಖಾತೆಗಳನ್ನು ಪತ್ತೆ ಹಚ್ಚಲಾಗದು ಎಂಬುದು ತಪ್ಪು ಕಲ್ಪನೆ..

ಕೆಲವರು ನಕಲಿ ಪ್ರೊಫೈಲ್ ಗಳು ಅಥವಾ ವಿದೇಶದಲ್ಲಿ ನೋಂದಾಯಿತ ಖಾತೆಗಳನ್ನು ಬಳಸುವುದರಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು. ಅವರನ್ನು ಪತ್ತೆ ಹಚ್ಚಲಾಗದು ಎಂದು ಭಾವಿಸಿಕೊಂಡಿದ್ದರೆ, ಅದು ಸಂಪೂರ್ಣ ತಪ್ಪು. ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣ ಕಂಪೆನಿಗಳು, ರಾಷ್ಟ್ರೀಯ ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ಸಹಕಾರ ಚಾಲನ್ ಗಳೊಂದಿಗೆ ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಗುರುತಿಸಲು ಕೆಲಸ ಮಾಡುತ್ತಿವೆ. ಖಾತೆ ಎಲ್ಲಿಂದ ತೆರೆಯಲ್ಪಟ್ಟಿದ್ದರೂ ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದವರು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article