ಆಳ್ವಾಸ್ ಪಿಯು ಕಾಲೇಜಿನ ಸಾಧನೆಯ ಗುಟ್ಟು: ಒಂದು ಕಾಲೇಜು-15 ಶೈಕ್ಷಣಿಕ ವಿಭಾಗಗಳು

ಆಳ್ವಾಸ್ ಪಿಯು ಕಾಲೇಜಿನ ಸಾಧನೆಯ ಗುಟ್ಟು: ಒಂದು ಕಾಲೇಜು-15 ಶೈಕ್ಷಣಿಕ ವಿಭಾಗಗಳು


ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಎನ್‌ಸಿಆರ್‌ಟಿಇ ಪಠ್ಯಕ್ರಮದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಯೋಜಿತ  ವ್ಯವಸ್ಥೆಯಲ್ಲಿ ಪರಿಣಾಮಕಾರಿ ತರಬೇತಿ ನೀಡಲಾಗುತ್ತದೆ. ಪದವಿಪೂರ್ವ ಕಾಲೇಜಿಗೆ ಪ್ರಾಂಶುಪಾಲರ ನೇತೃತ್ವವಿದ್ದು 15 ಶೈಕ್ಷಣಿಕ ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತೀ ವಿಭಾಗಕ್ಕೂ ಒಬ್ಬ ಮುಖ್ಯ ವ್ಯವಸ್ಥಾಪಕರಿದ್ದು ಅವರ ಮೇಲುಸ್ತುವಾರಿಯಲ್ಲಿ 20ಕ್ಕೂ ಅಧಿಕ ಉಪನ್ಯಾಸಕರ ತಂಡ ಮತ್ತು ಪ್ರತ್ಯೇಕ ಶಿಕ್ಷಕೇತರ ತಂಡಗಳು ಕಾರ್ಯನಿರ್ವಹಿಸುತ್ತವೆ. ಪ್ರತೀ ದಿನ 1.30 ಗಂಟೆಗಳ ಡೌಟ್ ಕ್ಲಿಯರಿಂಗ್ ಸೆಶನ್‌ಗಳು ನಡೆಯುತ್ತವೆ. ಬೆಳಿಗ್ಗೆ ಹಾಗೂ ಸಂಜೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕಲಿಕಾ ಅವಧಿಯನ್ನು ಮೀಸಲಿಡಲಾಗಿದೆ. ಪದವಿಪೂರ್ವ ತರಗತಿಗಳ ಸರಿಸುಮಾರು 6 ರಿಂದ 7 ಸಾವಿರ ವಿದ್ಯಾರ್ಥಿಗಳು ಈ ಕಲಿಕಾ ಅವಧಿಗಳಲ್ಲಿ ಅಭ್ಯಾಸ ನಿರತರಾಗುತ್ತಾರೆ. ವಿದ್ಯಾರ್ಥಿಗಳ ಯೋಗಕ್ಷೇಮವನ್ನು ನೋಡಿಕೊಳ್ಳಲು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳ ತಂಡವು ಅವಿರತವಾಗಿ ಕಾರ್ಯನಿರ್ವಹಿಸುತ್ತದೆ. ಈ ವಿದ್ಯಾರ್ಥಿಕೇಂದ್ರಿತ ಶೈಕ್ಷಣಿಕ ವ್ಯವಸ್ಥೆ ವಿದ್ಯಾರ್ಥಿಗಳ ಉನ್ನತಿಗೆ ಸದಾ ಸಹಕರಿಯಾಗಿದೆ. 

ಇಂದು ಜನಮಾನಸದಲ್ಲಿ ಮನೆಮಾತಾಗಿರುವ ಇಂತಹ ವಿನೂತನ ಹಾಗೂ ಪರಿಣಾಮಕಾರಿ ಶೈಕ್ಷಣಿಕ ವ್ಯವಸ್ಥೆಯನ್ನು ಕರ್ನಾಟಕಕ್ಕೆ ಪರಿಚಯಿಸಿದ ಕೀರ್ತಿ ಆಳ್ವಾಸ್‌ಗೆ ಸಲ್ಲುತ್ತದೆ. ಪ್ರತಿಭಾನ್ವಿತ ಮತ್ತು ನುರಿತ ಉಪನ್ಯಾಸಕರ ತಂಡದ ನಿರಂತರ ಪರಿಶ್ರಮ ಹಾಗೂ ಅವಿಶ್ರಾಂತ ದುಡಿಮೆಯ ಫಲವಾಗಿ ವಿದ್ಯಾರ್ಥಿಗಳಿಂದ ಪ್ರತೀ ಬಾರಿಯ ಫಲಿತಾಂಶದಲ್ಲೂ ರಾಜ್ಯದ ಮೊದಲ ಹತ್ತು ರ‍್ಯಾಂಕ್‌ಗಳಲ್ಲಿ ಆಳ್ವಾಸ್ ಸಿಂಹಪಾಲು ಪಡೆಯುದರ ಜೊತೆಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗುವವರ ಸಂಖ್ಯೆ ದೊಡ್ಡದಿದೆ. ಹೀಗೆ ಸಂಯೋಜಿತ ವ್ಯವಸ್ಥೆಯಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಳ್ವಾಸ್ ಶ್ರೇಷ್ಠ ಸಾಧನೆ ಮಾಡಲು ಡಾ. ಎಂ.ಮೋಹನ ಆಳ್ವರ ನೇರ ಮಾರ್ಗದರ್ಶನದ ಕೊಡುಗೆಯು ಬಹಳಷ್ಟಿದೆ ಎನ್ನುತ್ತಾರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚರ‍್ಯ ಪ್ರೊ. ಎಂ. ಸದಾಕತ್.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article