
ಮೂಡುಬಿದಿರೆಯಲ್ಲಿ ‘ಚೀಲ ತನ್ನಿ ಇಲ್ಲವೇ ಚೀಲ ಖರೀದಿಸಿ’ ಅಭಿಯಾನ
Friday, May 23, 2025
ಮೂಡುಬಿದಿರೆ: ಇಲ್ಲಿನ ಪುರಸಭೆ ಮತ್ತು ರೋಟರಿ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ‘ಪ್ಲಾಸ್ಟಿಕ್ ಚೀಲ ಬೇಡ ಅನ್ನಿ ಬಟ್ಟೆ ಚೀಲ ನೀವು ತನ್ನಿ’ ಅಭಿಯಾನವು ಶುಕ್ರವಾರ ಮೂಡುಬಿದಿರೆಯ ಸಂತೆ ಮಾರುಕಟ್ಟೆಯಲ್ಲಿ ನಡೆಯಿತು.
ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ ಪ್ರಾಸ್ತಾವಿಕವಾಗಿ ಮಾತನಾಡಿ, ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ತ್ಯಾಜ್ಯ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಭಿಯಾನವನ್ನು ಕೈಗೊಳ್ಳಲಾಗಿದೆ. ಮಾಕೆ೯ಟ್‌ಗೆ ಬರುವ ಗ್ರಾಹಕರು ಹಣವನ್ನು ಮಾತ್ರ ತರುತ್ತಿದ್ದು ಚೀಲವನ್ನು ತರದೆ ಪ್ಲಾಸ್ಟಿಕ್ ಚೀಲವನ್ನು ತೆಗೆದುಕೊಳ್ಳುತ್ತಿದ್ದಾರೆ ಅಂತಹವರಲ್ಲಿ ಬಟ್ಟೆ ಚೀಲಗಳನ್ನು ಬಳಸುವಂತೆ ಪ್ರೇರೇಪಿಸಲಾಗುತ್ತಿದ್ದು, ಬಟ್ಟೆಯ ಚೀಲಗಳಿಗೆ ಕೇವಲ ಐದು ರೂ. ಮಾತ್ರ ಆಗಿರುತ್ತದೆ ಎಂದು ಹೇಳಿದರು.
ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಪಿ.ಕೆ. ಥೋಮಸ್, ರೋಟರಿ ಕ್ಲಬ್‌ನ ಅಧ್ಯಕ್ಷ ರವಿ ಪ್ರಸಾದ್ ಉಪಾಧ್ಯಾಯ, ಸದಸ್ಯ ಸಿ.ಹೆಚ್. ಗಫೂರ್, ಮಹಮ್ಮದ್ ಆರಿಫ್, ಜಯರಾಮ್ ಕೋಟ್ಯಾನ್, ಸ್ವಚ್ಛತಾ ರಾಯಭಾರಿ ಸಂಧ್ಯಾ ಭಟ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಪಿ.ಕೆ. ಥೋಮಸ್, ರೋಟರಿ ಕ್ಲಬ್‌ನ ಅಧ್ಯಕ್ಷ ರವಿ ಪ್ರಸಾದ್ ಉಪಾಧ್ಯಾಯ, ಸದಸ್ಯ ಸಿ.ಹೆಚ್. ಗಫೂರ್, ಮಹಮ್ಮದ್ ಆರಿಫ್, ಜಯರಾಮ್ ಕೋಟ್ಯಾನ್, ಸ್ವಚ್ಛತಾ ರಾಯಭಾರಿ ಸಂಧ್ಯಾ ಭಟ್ ಉಪಸ್ಥಿತರಿದ್ದರು.
ಆಳ್ವಾಸ್ ಕಾಲೇಜಿನ ಬಿಎಸ್‌ಡಬ್ಲ್ಯೂ, ಎಂಎಸ್‌ಡಬ್ಲ್ಯೂ, ಪತ್ರಿಕೋದ್ಯಮದ ವಿಭಾಗ ಮತ್ತು ವಾಮದಪದವು ಪದವಿ ಕಾಲೇಜಿನ ವಿದ್ಯಾಥಿ೯ಗಳು ಸ್ವಯಂ ಸೇವಕರಾಗಿ ಭಾಗವಹಿಸಿ ಜಾಗೃತಿ ಮೂಡಿಸಿದರು ಮತ್ತು ಡೊನೇಷನ್ ಬಾಕ್ಸ್ ಮೂಲಕ ಬಟ್ಟೆ ಚೀಲಕ್ಕಾಗಿ ಡೊನೇಷನ್ ಸಂಗ್ರಹಿಸಿದರು.