
ವಿದೇಶಿ ಪ್ರವಾಸಿಗರಿಂದ ಸಾವಿರ ಕಂಬದ ಬಸದಿ ದರ್ಶನ
Friday, May 9, 2025
ಮೂಡುಬಿದಿರೆ: 7ಸೀ ವಯೋಜರ್ ಹಡಗಿನಲ್ಲಿ ದ.ಕ. ಜಿಲ್ಲೆಗೆ ಬಂದ ಅಮೇರಿಕಾ ಸಹಿತ ವಿವಿಧ ದೇಶಗಳ ಪ್ರವಾಸಿಗರು ಶುಕ್ರವಾರ ಮೂಡುಬಿದಿರೆಯ ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಗೆ ಭೇಟಿ ನೀಡಿದರು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮೀಜಿ, ಕ್ಷೇತ್ರದ ವಿಶೇಷತೆಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಿದರು. ಜೈನ ಧರ್ಮಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರಿಸಿದರು.
ಲೋಕ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಉಗ್ರ ದಾಳಿಯಿಂದ ಹುತಾತ್ಮರಾದ ಸೈನಿಕರು ಹಾಗೂ ನಾಗರಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.