ಸಿಬಿಎಸ್‌ಇ: ರೋಟರಿ ಶಾಲೆಗೆ ಉತ್ತಮ ಫಲಿತಾಂಶ

ಸಿಬಿಎಸ್‌ಇ: ರೋಟರಿ ಶಾಲೆಗೆ ಉತ್ತಮ ಫಲಿತಾಂಶ


ಮೂಡುಬಿದಿರೆ : ಸಿಬಿಎಸ್‌ಸಿ ಪರೀಕ್ಷೆಯ ಹತ್ತನೇ ತರಗತಿಯಲ್ಲಿ ರೋಟರಿ ಕೇಂದ್ರೀಯ ಶಾಲೆಯು ಶೇ. 100 ಫಲಿತಾಂಶ ದಾಖಲಿಸಿದೆ. ಒಟ್ಟು 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಶೇ.95 ಅಂಕ ಪಡೆದಿದ್ದಾರೆ. 

ಡಿ.ಎಂ ಸ್ತುತಿ (95.4), ದೃತಿ ವಿನಯ್ ಮೊಯ್ಲಿ (95.4), ಮನ ಫಾತಿಮಾ (93.8), ಆಯಿಷಾ ನೀಮಾ (93.2), ಆದ್ಯ ಜೈನ್ (92.4), ದೃತಿ.ವಿ (92.4) ಆಮಾಂಡ ಮೆಂಡಿಸ್(92.2), ಇಫಾ ಅಹಮದ್ ಎಲಿಯಾಸ್ (91.8), ಸಫಾ ಫಾತಿಮಾ (91.8), ತನ್ವಿ.ಕೆ. ಪೂಜಾರಿ (90.8),ವೃಷ್ಟಿಜೈನ್ (90.8), ಸಾನ್ವಿ ಸಜಂಕಿಲ (90.4) ಅಂಕ ಪಡೆದಿದ್ದಾರೆ.

12 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿ ವಿಶಿಷ್ಟ ಶ್ರೇಣಿ ಪಡೆದಿದ್ದಾರೆ. ಸಂಸ್ಕೃತದಲ್ಲಿ ವಿದ್ಯಾರ್ಥಿನಿ 100 ಅಂಕ ಪಡೆದಿದ್ದಾಳೆ.

ಸಾಧಕ ವಿದ್ಯಾರ್ಥಿಗಳನ್ನು ರೋಟರಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ನಾರಾಯಣ ಪಿ.ಎಂ, ಕಾರ್ಯದರ್ಶಿ ಅನಂತ ಕೃಷ್ಣರಾವ್ ಹಾಗೂ ಸಂಚಾಲಕ ಜೆ.ಡಬ್ಲ್ಯೂ ಪಿಂಟೊ, ಪ್ರಾಂಶುಪಾಲರು, ಶಿಕ್ಷಕರು ಅಭಿನಂದಿಸಿದ್ದಾರೆ.














Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article