
ಕಾರು ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಸಾವು
Friday, May 9, 2025
ಉಳ್ಳಾಲ: ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತ ಪಟ್ಟ ಘಟನೆ ತೊಕ್ಕೊಟ್ಟು ಸಮೀಪದ ಪಂಡಿತ್ ಹೌಸಲ್ಲಿ ಗುರುವಾರ ರಾತ್ರಿ ನಡೆದಿದೆ.
ಪಂಡಿತ್ ಹೌಸ್ ನಿವಾಸಿ ಪೂರ್ಣಿಮ(59) ಮೃತ ಮಹಿಳೆ.ಪೂರ್ಣಿಮ ಅವರು ನಿನ್ನೆ ಸಂಜೆ ತನ್ನ ಪತಿಯ ಅಣ್ಣ ಜಯರಾಜ್ ಅವರ ಮನೆಗೆ ತೆರಳಿದ್ದರು.
ರಾತ್ರಿ ಬಸ್ಸಲ್ಲಿ ವಾಪಸ್ ಆದ ಅವರು ಪಂಡಿತ್ ಹೌಸ್ ತಂಗುದಾಣದಲ್ಲಿ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಕೇರಳ ಮೂಲದ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಪೂರ್ಣಿಮ ಅವರು ಪತಿ, ಓರ್ವ ಪುತ್ರನನ್ನ ಅಗಲಿದ್ದಾರೆ.