
ಪರ್ಕಳ ಪರಿಸರದಲ್ಲಿ ಜಿಂಕೆ ಪ್ರತ್ಯಕ್ಷ
Sunday, June 22, 2025
ಉಡುಪಿ: ಇಲ್ಲಿಗೆ ಸಮೀಪದ ಪರ್ಕಳ ಮಾಣಿಬೆಟ್ಟು ಪ್ರದೇಶದಲ್ಲಿ ಎರಡು ಮೂರು ಜಿಂಕೆಗಳು ಅತ್ತಿಂದಿತ್ತ ಸಂಚರಿಸುತ್ತಿದ್ದು, ಸ್ಥಳೀಯರಾದ ನಿತೇಶ್, ಜಯರಾಮ, ಅಕ್ಷತಾ, ಅರ್ಪಿತ ಮೊದಲಾದವರು ಕಂಡಿದ್ದಾರೆ.
ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಜಿಂಕೆಗಳನ್ನು ಕಂಡಿದ್ದು, ಅವು ಮಾಣಿಬೆಟ್ಟು ಪರಿಸರದ ಕಾಡಿಗೆ ಹೋಗಿರುವುದಾಗಿ ಅವರು ತಿಳಿಸಿದ್ದಾರೆ.
ಈ ಹಿಂದೆ ಶೆಟ್ಟಿಬೆಟ್ಟು ಪರಿಸದಲ್ಲಿ ಬೇಟೆಗಾರರು ಇಟ್ಟ ಉರಳಿಗೆ ಸಿಲುಕಿ ಕಾಲಿಗೆ ಏಟಾಗಿದ್ದ ಜಿಂಕೆಯೊಂದು ಈ ಪ್ರದೇಶದಲ್ಲಿ ಸಿಕ್ಕಿತ್ತು. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಲಾಗಿತ್ತು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳಬೆಟ್ಟು ತಿಳಿಸಿದ್ದಾರೆ.