ಕಡಬ ಪಟ್ಟಣ ಪಂಚಾಯತ್ ಚುನಾವಣಾ ವೇಳಾಪಟ್ಟಿ ಪ್ರಕಟ

ಕಡಬ ಪಟ್ಟಣ ಪಂಚಾಯತ್ ಚುನಾವಣಾ ವೇಳಾಪಟ್ಟಿ ಪ್ರಕಟ

ಕಡಬ: ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ವೇಳಾಪಟ್ಟಿ ನಿಗದಿಯಾಗಿದ್ದು, ಚುನಾವಣೆಯ ಅಧಿಸೂಚನೆಯನ್ನು ಜುಲೈ 29 ರಂದು ಹೊರಡಿಸಲಾಗಿದೆ. ನಾಮ ಪತ್ರಗಳನ್ನು ಸಲ್ಲಿಸಲು ಆ.5 ಕೊನೆಯ ದಿನ. ಆಗಸ್ಟ್ 6 ರಂದು ನಾಮ ಪತ್ರಗಳನ್ನು ಪರಿಶೀಲಿಸಲಾಗುತ್ತದೆ.  ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಆ.8 ಕೊನೆಯ ದಿನ. ಮತದಾನ ಅವಶ್ಯವಿದ್ದರೆ ಮತದಾನವನ್ನು ಆ.17 ರಂದು  ನಡೆಸಲಾಗುತ್ತದೆ.(ಸಮಯ ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಗಳವರೆಗೆ) ಮರು ಮತದಾನ ಇದ್ದಲ್ಲಿ, ನಡೆಸಬೇಕಾದ ದಿನ ಆಗಸ್ಟ್ 19. ಮತಗಳ ಎಣಿಕೆ ಆ.20 ರಂದು ಬೆಳಗ್ಗೆ 8 ಗಂಟೆಗೆ ಕಡಬ ತಾಲೂಕು ಕೇಂದ್ರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ  ದರ್ಶನ್ ಹೆಚ್.ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article