
ಕುಂದಾಪ್ರ ಕನ್ನಡ ಸ್ಪರ್ಧೆ
Friday, July 11, 2025
ಕುಂದಾಪುರ: ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ, ಕುಂದಾಪುರ ಭಂಡಾರ್ಕರ್ಸ್ ಕಾಲೇಜು ಸಹಯೋಗದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಕುಂದಾಪ್ರ ಕನ್ನಡ ಸ್ಪರ್ಧೆ ದಿನಾಂಕ ಜುಲೈ 19 ರಂದು ಮಧ್ಯಾಹ್ನ 2.3೦ಕ್ಕೆ ಏರ್ಪಡಿಸಲಾಗಿದೆ.
ಕುಂದ ಕನ್ನಡ ಗಾದೆಗಳನ್ನು ಎರಡು ನಿಮಿಷದಲ್ಲಿ ಸ್ಪಷ್ಟವಾಗಿ ಅತಿ ಹೆಚ್ಚು ಬಾರಿ ಹೇಳುವುದು ಹಾಗೂ 15 ನಿಮಿಷದಲ್ಲಿ ಕುಂದ ಕನ್ನಡ ಶಬ್ದಗಳನ್ನು ಅತಿ ಹೆಚ್ಚು ಬರೆಯುವುದು. ಈ ಎರಡು ಸ್ಪರ್ಧೆಗಳು ನಡೆಯುತ್ತವೆ.
ಭಾಗವಹಿಸುವವರು ಜ್ಯೋತಿ ಸಾಲಿಗ್ರಾಮ, ರೇಡಿಯೋ ಕುಂದಾಪ್ರ 19.6, ಇ ಓ, ಭಂಡಾರ್ಕರ್ಸ್ ಕಾಲೇಜು, ಕುಂದಾಪುರ ಈ ವಿಳಾಸಕ್ಕೆ ಪೂರ್ಣ ವಿಳಾಸದೊಂದಿಗೆ ಪತ್ರ ಬರೆದು ಜುಲೈ 16 ರೊಳಗೆ ತಿಳಿಸಬೇಕು ಎಂದು ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಪ್ರಕಟಣೆ ತಿಳಿಸಿದೆ.