ಮೂಡುಬಿದಿರೆ ತಾಲೂಕಿನಲ್ಲಿ ನಾಗರಪಂಚಮಿ ಆಚರಣೆ
Tuesday, July 29, 2025
ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನಾಧ್ಯಂತ ಇಂದು ಬೆಳಗ್ಗಿನಿಂದ ಎಲ್ಲಾ ದೇವಸ್ಥಾನಗಳು ಹಾಗೂ ನಾಗಬನಗಳಲ್ಲಿ ಸಂಭ್ರಮದ ನಾಗರಪಂಚಮಿಯನ್ನು ಭಕ್ತಿಯಿಂದ ಆಚರಿಸಲಾಯಿತು.
ಲಾಡಿ ಶ್ರೀ ಚತುರ್ಮುಖ ಬ್ರಹ್ಮ ದೇವಳದ ನಾಗಬನದಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಿ ನಾಗರಪಂಚಮಿ ಆಚರಿಸಲಾಯಿತು.
ಬೆಳುವಾಯಿ ಅಂತಬೆಟ್ಟು ಪ್ರಾಕೃತಿಕ ನಾಗಬನದಲ್ಲಿ ಸಂಭ್ರಮದ ನಾಗರಪಂಚಮಿ ಆಚರಿಸಲಾಯಿತು.
ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ನಾಗಬನದಲ್ಲಿ ನಾಗರ ಪಂಚಮಿ ಸಡಗರದಿಂದ ಆಚರಿಸಲಾಯಿತು.
ಕಲ್ಲಮುಂಡ್ಕೂರು ತೊಡಂಕಿಲ ಸಾಲ್ಯಾನ್ ಕುಟುಂಬಸ್ಥರ ನಾಗಬನದಲ್ಲಿ ಸಂಭ್ರಮ ಸಡಗರದ ನಾಗರ ಪಂಚಮಿ ಆಚರಿಸಲಾಯಿತು.
ಪುತ್ತಿಗೆ ಮರಾಠಿ ಸಮಾಜದ ನಾಗಬನದಲ್ಲಿ ನಾಗರ ಪಂಚಮಿ ಆಚರಿಸಲಾಯಿತು.



