ರಸ್ತೆ ದುರಸ್ತಿಗೆ ಸ್ಪೀಕರ್ ಪತ್ರ

ರಸ್ತೆ ದುರಸ್ತಿಗೆ ಸ್ಪೀಕರ್ ಪತ್ರ

ಮಂಗಳೂರು: ಉಳ್ಳಾಲ ತಾಲೂಕಿನ ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತೊಕ್ಕೊಟ್ಟಿನಿಂದ ಕುತ್ತಾರ್‌ವರೆಗಿನ ರಸ್ತೆಯು ಸಂಚಾರಕ್ಕೆ ಯೋಗ್ಯವಾಗಿಲ್ಲ. ಇದನ್ನು ದುರಸ್ತಿಪಡಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗೆ ಸ್ಪೀಕರ್ ಯು.ಟಿ.ಖಾದರ್ ಪತ್ರ ಬರೆದಿದ್ದಾರೆ.

ಲೋಕೋಪಯೋಗಿ ಇಲಾಖೆಯ ಈ ರಾಜ್ಯ ಹೆದ್ದಾರಿಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. ತೊಕ್ಕೊಟ್ಟು ಜಂಕ್ಷನ್ನನ್ನು ಸಂಪರ್ಕಿಸುವ ಚೆಂಬುಗುಡ್ಡೆಯಿಂದ ಕುತ್ತಾರ್ವರೆಗಿನ ರಸ್ತೆಯನ್ನು 3 ವರ್ಷದ ಹಿಂದೆ ನಿರ್ಮಿಸಲಾಗಿದೆ. ಇದೀಗ ಈ ರಸ್ತೆಯ ಸಾಕಷ್ಟು ಕಡೆ ಡಾಮರೀಕರಣ ಶಿಥಿಲಗೊಂಡಿದೆ. ವಾಹನ ಸಂಚಾರಕ್ಕೂ ಯೋಗ್ಯವಾಗಿಲ್ಲ. ಈ ರಸ್ತೆಯ ಡಾಮರೀಕರಣವು ಶಿಥಿಲಗೊಳ್ಳಲು ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸ ಬೇಕು. ವೈಫಲ್ಯ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ರಸ್ತೆಯನ್ನು ತಕ್ಷಣ ಸಂಚಾರಯೋಗ್ಯ ರಸ್ತೆಯನ್ನಾಗಿ ದುರಸ್ತಿಗೊಳಿಸಲು ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article