
ವುಮೆನ್ಸ್ ಸ್ಟೇಟ್ ವುಶು ಲೀಗ್ ಕ್ರೀಡಾಕೂಟ
Friday, August 8, 2025
ಮಂಗಳೂರು: ಖೇಲೋ ಇಂಡಿಯಾ ಅಸ್ಮಿತಾ ವುಮೆನ್ಸ್ ಸ್ಟೇಟ್ ವುಶು ಲೀಗ್ ಕ್ರೀಡಾಕೂಟ ಆ.9 ಮತ್ತು 10ರಂದು ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವುಶು ಅಸೋಸಿಯೇಶ್ನ ಪ್ರಧಾನ ಕಾರ್ಯದರ್ಶಿ ಅಶೋಕ್ ಮೊಕಾಶಿ, ರಾಜ್ಯದ ಎಲ್ಲ ಜಿಲ್ಲೆಗಳಿಂದ ಒಟ್ಟು 200 ಮಹಿಳಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.
ಆ. 9ರಂದು ವಿಶ್ವ ವುಶು ಕುಂಗ್ ಫೂ ದಿನಾರಣೆಯ ಪ್ರಯುಕ್ತ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆದು ಬಳಿಕ ಕ್ರೀಡಾಕೂಟ ಆರಂಭವಾಗಲಿದೆ. ವಿಜೇತರಿಗೆ ಪ್ರಶಸ್ತಿ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಪದಕ ಪಡೆದ ಕ್ರೀಡಾಪಟುಗಳನ್ನು ಝೋನಲ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು.
ಅಸೋಶಿಯಸ್ನ್ನ ಕೋಶಾಧಿಕಾರಿ ಸಂಗಮೇಶ್ ಲಯದಗುಂಡಿ, ದ.ಕ. ಜಿಲ್ಲಾ ವುಶು ಅಸೋಶಿಯೇಶನ್ನ ಪ್ರಧಾನ ಕಾರ್ಯದರ್ಶಿ ಹಾಗೂ ಸಂಘಟಕ ರೋಹನ್ ಎಸ್., ಪ್ರದೀಪ್ ಪಿ. ಆಚಾರ್ಯ ಉಪಸ್ಥಿತರಿದ್ದರು.