ವೆನ್‌ಲಾಕ್ ಆಸ್ಪತ್ರೆಗೆ ಆಂಬುಲೆನ್ಸ್‌ನ ಬಗ್ಗಿ ಭಾಗ್ಯ
Sunday, August 17, 2025
ಮಂಗಳೂರು: ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅವರು ವೆನ್‌ಲಾಕ್ ಆಸ್ಪತ್ರೆಗೆ ಎಂಎಲ್‌ಸಿ ಲ್ಯಾಡ್‌ನಿಂದ ಆಂಬುಲೆನ್ಸ್ ಬಗ್ಗಿ ಕೊಡಿಸಿದ್ದಾರೆ.
ಇದು ರೋಗಿಗಳಿಗೆ ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ತೆರಳಲು ಬಹಳ ಅನುಕೂಲವಾಗಲಿದೆ. ಹೊಸ ಕಟ್ಟಡದಲ್ಲಿ ಶಸ್ತ್ರ ಚಿಕಿತ್ಸೆ ಆದರೆ ಒಂದೆರಡು ದಿವಸ ಆದ ಮೇಲೆ ಹಳೆ ಕಟ್ಟಡಕ್ಕೆ ರೋಗಿಗಳನ್ನು ಸ್ಥಳಾಂತರ ಮಾಡಬೇಕಾಗುತ್ತೆ. ಸಿಟಿ/ಎಂಆರ್‌ಐ/ಎಕ್ಸ್‌ರಾ/ಸ್ಕ್ಯಾನಿಂಗ್‌ಗೆ ರೋಗಿಗಳನ್ನು ಕರೆದುಕೊಂಡು ಹೋಗಲು ಬಹಳ ಉಪಯುಕ್ತವಾಗಲಿದೆ.
ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಅಧೀಕ್ಷಕರು ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಐವಾನ್ ಡಿಸೋಜ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ರೋಗಿಗಳಿಗೆ ಬಹಳ ಉಪಯುಕ್ತ ಎಂದು ತಿಳಿಸಿದ್ದಾರೆ. ಈ ವ್ಯವಸ್ಥೆ ಯಾವ ಸರ್ಕಾರಿ ಆಸ್ಪತ್ರೆಗಳಲ್ಲಿ ಇಲ್ಲದಿರಬಹುದು ಎಂದು ತಿಳಿಸಿದ್ದಾರೆ.