ಆಗಸ್ಟ್ 15 ರಂದು ಮೂಡುಬಿದಿರೆಯಲ್ಲಿ "ಆರ್.ಎಸ್.ಎಸ್-100 : ಪಥಸಂಚಲನ" ಲೋಕಾರ್ಪಣೆ

ಆಗಸ್ಟ್ 15 ರಂದು ಮೂಡುಬಿದಿರೆಯಲ್ಲಿ "ಆರ್.ಎಸ್.ಎಸ್-100 : ಪಥಸಂಚಲನ" ಲೋಕಾರ್ಪಣೆ


ಮೂಡುಬಿದಿರೆ: ಸ್ವಾತಂತ್ರ್ಯ ದಿನಾಚರಣೆಯಂದು ಬೆಳಗ್ಗೆ 10.30ಕ್ಕೆ “ಆರೆಸ್ಸೆಸ್ 100: ಪಥಸಂಚಲನ’ ಪುಸ್ತಕದ ಲೋಕಾರ್ಪಣಾ ಸಮಾರಂಭವು ಮೂಡುಬಿದಿರೆಯ ಸಮಾಜ ಮಂದಿರ ಸಭಾಂಗಣದಲ್ಲಿ ನಡೆಯಲಿದೆ ಎಂದು ಲೇಖಕ, ಪ್ರಕಾಶಕ, ಶ್ರೀ ನಂದಿಕೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶಿಕಾರಿಪುರ ಈಶ್ವರಭಟ್ ತಿಳಿಸಿದರು.

ಅವರು ಸೋಮವಾರ ಬೆಳಿಗ್ಗೆ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು. ಪುಸ್ತಕವನ್ನು ವಿದ್ಯಾರ್ಥಿ ಪರಿಷತ್‌ನ ರಾಜ್ಯಾಧ್ಯಕ್ಷ, ಲೇಖಕ ಪ್ರಾಧ್ಯಾಪಕ ಡಾ. ರವಿ ಮಂಡ್ಯ ಅವರು ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರಿನ ವಿದ್ಯಾಭಾರತಿ ಸಂಸ್ಥೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದೂ ತಿಳಿಸಿದರು.

1925ರ ವಿಜಯದಶಮಿಯಂದು ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ [ಆರೆಸ್ಸೆಸ್-ಸಂಘ ಎಂದೇ ಜನಜನಿತವಾಗಿದೆ] ಇದೀಗ ಶತಮಾನದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಪುಸ್ತಕ ರಚನೆಯಾಗಿದೆ ಎಂದರು. ಪುಸ್ತಕದಲ್ಲಿ ಸಂಘದ ಸ್ಥಾಪನೆಯ ಹಿನ್ನೆಲೆ, ಸ್ವಾತಂತ್ರ್ಯ ಸಂಗ್ರಾಮ, ರಾಷ್ಟ್ರ ರಕ್ಷಣೆ ಮತ್ತು ಸಮಾಜ ಸೇವೆಯಲ್ಲಿ ಸಂಘದ ಪಾತ್ರ, ತುರ್ತು ಪರಿಸ್ಥಿತಿ ವಿರುದ್ಧ ಸಂಘದ ಭೂಗತ ಹೋರಾಟ, ಅಯೋಧ್ಯಾ ಆಂದೋಲನ ಮತ್ತು ಆರೆಸ್ಸೆಸ್ ಬಗ್ಗೆ ಗಣ್ಯರ ಅಭಿಮತವೂ ಸೇರಿದಂತೆ 18 ಅಧ್ಯಾಯಗಳನ್ನೊಳಗೊಂಡಿದೆ ಎಂದು ತಿಳಿಸಿದರು.

ಆರೆಸ್ಸೆಸ್ ತನ್ನ ಶತಾಬ್ಧ ಯ ಸಂಭ್ರಮದಲ್ಲಿ ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ನಾಗರಿಕ ಶಿಷ್ಟಾಚಾರ, ಗ್ರಾಮ ವಿಕಾಸ, ಸ್ವದೇಶೀ ಜಾಗರಣವೂ ಸೇರಿದಂತೆ ಹಲವು ಸಾಮಾಜಿಕ ಪರಿವರ್ತನಾ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಈಗಾಗಲೇ ಕಾರ್ಯೋನ್ಮುಖವಾಗಿದೆ. ದೇಶದಲ್ಲಿ ಸುಮಾರು ಒಂದು ಲಕ್ಷದಷ್ಟು ಶಾಖೆಗಳಿದ್ದು ಸಂಘವು ಒಂದೂವರೆ ಲಕ್ಷದಷ್ಟು ಸೇವಾಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಅಮೇರಿಕಾ, ಕೆನಡಾ, ಇಂಗ್ಲೆಂಡ್, ಫ್ರಾನ್ಸ್, ಕೀನ್ಯಾ, ಜಪಾನ್, ಜರ್ಮನಿ ಸೇರಿದಂತೆ ಜಗತ್ತಿನ ನೂರಕ್ಕೂ ಮಿಕ್ಕು ದೇಶಗಳಲ್ಲಿ ಸಂಘ ಮತ್ತು ಪರಿವಾರದ ಸಂಘಟನೆಗಳು [ಹಿಂದೂ ಸ್ವಯಂ ಸೇವಕ ಸಂಘ, ವಿಶ್ವ ಹಿಂದು ಪರಿಷತ್, ರಾಷ್ಟ್ರ ಸೇವಿಕಾ ಸಮಿತಿ, ಸಂಸ್ಕೃತ ಭಾರತಿ ಇತ್ಯಾದಿ] ಅನಿವಾಸಿ ಹಿಂದೂಗಳ ಸಂಘಟನಾ ಕಾರ್ಯದಲ್ಲಿ ನಿರತವಾಗಿವೆ ಎಂದ ಈಶ್ವರ್‌ಭಟ್ ಅವರು ವಿಶ್ವಶಾಂತಿ ಮತ್ತು ವಿಶ್ವ ಕಲ್ಯಾಣದ ಸಂಕಲ್ಪದೊಂದಿಗೆ ಸಂಘ ತನ್ನ ಶತಾಬ್ಬಿಯನ್ನು ಆಚರಿಸುತ್ತಿದೆ. ಆರ್‌ಎಸ್‌ಎಸ್ -100 ಕೃತಿ ಗತ 100 ವರ್ಷಗಳಲ್ಲಿ ಭಾರತ ಸಾಗಿ ಬಂದ ಇತಿಹಾಸ ಕಥನವೂ ಹಾಗಿದೆ ಎಂದೂ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article