ಮೂಡುಬಿದಿರೆ ಬಿಲ್ಲವ ಸಂಘ ಅಮೃತ ಮಹೋತ್ಸವ 8ನೇ ಮಾಸಿಕ ಕಾರ್ಯಕ್ರಮ

ಮೂಡುಬಿದಿರೆ ಬಿಲ್ಲವ ಸಂಘ ಅಮೃತ ಮಹೋತ್ಸವ 8ನೇ ಮಾಸಿಕ ಕಾರ್ಯಕ್ರಮ


ಮೂಡುಬಿದಿರೆ: ಇಲ್ಲಿನ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಶ್ರೀ ನಾರಾಯಣ ಗುರು ಸೇವಾದಳ ಮತ್ತು ನಾರಾಯಣಗುರು ಮಹಿಳಾ ಘಟಕದ ಅಮೃತ ಮಹೋತ್ಸವ ಸಂಭ್ರಮದ 8ನೇ ಮಾಸಿಕ ಕಾರ್ಯಕ್ರಮ ಹಾಗೂ ವರಮಹಾಲಕ್ಷ್ಮೀ ಪೂಜೆ ಸಂಘದ ಕಾಮಧೇನು ಸಭಾಭವನದಲ್ಲಿ ಶುಕ್ರವಾರ ನಡೆಯಿತು. 

ಸಂಘದ ಅಧ್ಯಕ್ಷ, ವಕೀಲ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆವಹಿಸಿದರು. ಪುರಸಭೆ ಸದಸ್ಯೆ ಜಯಶ್ರೀ ಕೇಶವ್ ಕಾರ್ಯಕ್ರಮ ಉದ್ಘಾಟಿಸಿದರು. 

ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ ಸಂಸ್ಕಾರ ಪರಿವೀಕ್ಷಣ ಪ್ರಮುಖ್ ಮೀನಾಕ್ಷಿ ಧಾರ್ಮಿಕ ಉಪನ್ಯಾಸ ನೀಡಿದರು. 

ಆಳ್ವಾಸ್ ಹೆಲ್ತ್ ಸೆಂಟರ್‌ನ ಇಎನ್‌ಟಿ ತಜ್ಞೆ ಡಾ.ಶ್ವೇತಾ ಸಿ.ಪೂಜಾರಿ, ಮೂಡುಬಿದಿರೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಸಂತೋಷ್ ಪೂಜಾರಿ ಮುಖ್ಯ ಅತಿಥಿಯಾಗಿದ್ದರು. ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್, ಹಿರಿಯ ಸದಸ್ಯೆಯರಾದ ಅನಿತಾ ಮುಂಡೊಟ್ಟು, ಹೇಮಾ ಸನಿಲ್, ರತ್ನಾವತಿ, ರಾಜೀವಿ ಎಸ್.ಅಂಚನ್, ವಿನುತಾ ಆನಂದ್, ಮಾತೃ ಸಂಘ, ಸೇವಾದಳ, ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸುಮಾ ರಂಜಿತ್ ಸ್ವಾಗತಿಸಿದರು. ಸಂಜಾತ ನಿರೂಪಿಸಿದರು. ಸುಶ್ಮಿತಾ ಕೋಟ್ಯಾನ್ ವಂದಿಸಿದರು. 

ಅರ್ಚಕ ಪ್ರದೀಪ್ ಶಾಂತಿ ಬಳಗದವರು ವರಮಹಾಲಕ್ಷೀ ಪೂಜೆ ನೆರವೇರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article