
ಪುರಸಭೆ ನೂತನ ಮಾರುಕಟ್ಟೆ ಕಾಮಗಾರಿಗೆ ಪುರಾತತ್ವ ಇಲಾಖೆ ನವದೆಹಲಿ ನಿರಾಕ್ಷೇಪಣೆ ಪತ್ರ ನೀಡಲು ಒಪ್ಪಿಗೆ
Friday, August 8, 2025
ಮೂಡುಬಿದಿರೆ: ಪುರಸಭೆ ನೂತನ ಮಾರುಕಟ್ಟೆ ಕಾಮಗಾರಿಗೆ ಪುರಾತತ್ವ ಇಲಾಖೆ ನವದೆಹಲಿ ನಿರಾಕ್ಷೇಪಣೆ ಪತ್ರ ನೀಡಲು ಒಪ್ಪಿದೆ ಎನ್ನಲಾಗಿದೆ.
ಪುರಾತತ್ವ ಇಲಾಖೆಯಿಂದ ನಿರಾಕ್ಷೇಪಣೆ ಪತ್ರ ಪಡೆಯದೆ ಕಾಮಗಾರಿ ನಡೆಸಿದ ಕಾರಣಕ್ಕೆ 2017ರಲ್ಲಿ ಜೈಸನ್ ತಾಕೋಡೆ ಸಲ್ಲಿಸಿದ ದಾವೆ ಹಿನ್ನೆಲೆಯಲ್ಲಿ ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಸುದೀರ್ಘ ವಿಚಾರಣೆ ಬಳಿಕ ನಿರಾಕ್ಷೇಪಣೆ ಪತ್ರ ನೀಡುವಂತೆ ಕಳೆದ ಅಕ್ಟೋಬರ್ ನಲ್ಲಿ ಹೈಕೋರ್ಟ್ ನವದೆಹಲಿಯ ಪುರಾತತ್ವ ಇಲಾಖೆಗೆ ಆದೇಶಿಸಿತ್ತು. ಪುರಾತತ್ವ ಇಲಾಖೆ ವಿಧಿಸಿದ ಕೆಲವು ಷರತ್ತುಗಳನ್ನು ಒಪ್ಪಿಕೊಳ್ಳುವ ಬಗ್ಗೆ ಪುರಸಭೆ ಲಿಖಿತ ಹೇಳಿಕೆ ನೀಡಿದ ಬಳಿಕ ನಿರಾಕ್ಷೇಪಣೆ ಪತ್ರ ನೀಡಲು ಪುರಾತತ್ವ ಇಲಾಖೆ ಒಪ್ಪಿದೆ ಎನ್ನಲಾಗಿದೆ.