ಒಡಿಯೂರು-ನಾಟಕ ಸ್ಪರ್ಧೆಯಲ್ಲಿ ಆಳ್ವಾಸ್‌ನ ಎರಡು ನಾಟಕಗಳಿಗೆ ಪ್ರಶಸ್ತಿ: ಜೀವನ್ ರಾಂ ಸುಳ್ಯ ಅತ್ಯುತ್ತಮ ನಿರ್ದೇಶಕ/ ಮನುಜ ನೇಹಿಗ ಅತ್ಯುತ್ತಮ ಸಂಗೀತ ಸಂಯೋಜಕ

ಒಡಿಯೂರು-ನಾಟಕ ಸ್ಪರ್ಧೆಯಲ್ಲಿ ಆಳ್ವಾಸ್‌ನ ಎರಡು ನಾಟಕಗಳಿಗೆ ಪ್ರಶಸ್ತಿ: ಜೀವನ್ ರಾಂ ಸುಳ್ಯ ಅತ್ಯುತ್ತಮ ನಿರ್ದೇಶಕ/ ಮನುಜ ನೇಹಿಗ ಅತ್ಯುತ್ತಮ ಸಂಗೀತ ಸಂಯೋಜಕ


ಮೂಡುಬಿದಿರೆ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಮತ್ತು ಒಡಿಯೂರು ಗ್ರಾಮೋತ್ಸವದ ಅಂಗವಾಗಿ, ಶ್ರೀಕ್ಷೇತ್ರದ ರಾಜಾಂಗಣದಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎರಡು ನಾಟಕಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿಯನ್ನು ಪಡೆದವು.


ಡಾ. ಜೀವನ್ ರಾಂ ಸುಳ್ಯ ರಚಿಸಿ, ನಿರ್ದೇಶಿಸಿದ "ದೇವವೃದ್ಧರು" ನಾಟಕವು ಅತ್ಯುತ್ತಮ ನಾಟಕ ಪ್ರಶಸ್ತಿಯೊಂದಿಗೆ ರೂ.50,000 ನಗದು ಬಹುಮಾನ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದೇ ನಾಟಕಕ್ಕೆ ಅತ್ಯುತ್ತಮ ಸಂಗೀತ ಸಂಯೋಜಕ  ಪ್ರಶಸ್ತಿಯನ್ನು ಆಳ್ವಾಸ್ ಪಿ.ಯು. ವಿದ್ಯಾರ್ಥಿ ಮನುಜ ನೇಹಿಗ ಸುಳ್ಯ ಪಡೆದುಕೊಂಡರು.

ಆಳ್ವಾಸ್‌ನ ಇನ್ನೊಂದು ತಂಡ ಪ್ರದರ್ಶಿಸಿದ, ಪ್ರಶಾಂತ್ ಶೆಟ್ಟಿ ಕೋಟ ನಿರ್ದೇಶಿಸಿದ್ದ ‘ಮಗು ಮತ್ತು ಮರ’ ನಾಟಕವು ದ್ವಿತೀಯ ಪ್ರಶಸ್ತಿಯೊಂದಿಗೆ ರೂ 30,000 ನಗದನ್ನು ಪಡೆಯಿತು. ಈ ನಾಟಕದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮನೋಜ್ ತೀರ್ಥಹಳ್ಳಿ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತೇಜಸ್ವಿನಿ ತರೀಕೆರೆ ಪಡೆದುಕೊಂಡರು.

ಪ್ರಶಸ್ತಿಯನ್ನು ಶ್ರೀ ಒಡಿಯೂರು ಗುರುದೇವಾನಂದ ಸ್ವಾಮಿಗಳು  ನೀಡಿದರು. ಸ್ಪರ್ಧೆಯಲ್ಲಿ ಉಡುಪಿ, ದ.ಕ ಜಿಲ್ಲೆಯ ಒಟ್ಟು 12 ತಂಡಗಳು ಭಾಗವಹಿಸಿದ್ದವು. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರು ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article