
"ಓಂಕಾರ" ನಾಟಕದ ಮೊದಲ ಪ್ರದಶ೯ನಕ್ಕೆ ಚಾಲನೆ
ಅಲಂಗಾರು ಬಡಗ ಶ್ರೀಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ತುಳು ನಾಟಕಗಳಲ್ಲಿ ಅಶ್ಲೀಲತೆಗಳಿವೆ ಎನ್ನುವ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಅವಿಭಜಿತ ದ.ಕ ಜಿಲ್ಲೆಯಲ್ಲಿರುವ ಯಾವುದೇ ತುಳು ನಾಟಕ ತಂಡಗಳಲ್ಲಿ ಅಶ್ಲೀಲತೆ ಕಾಣ ಸಿಗುವುದಿಲ್ಲ. ಪಿಂಗಾರ ಕಲಾವಿದರು ತಂಡ ಕಳೆದ ವರ್ಷ ಕದಂಬ ಎನ್ನುವ ಯಶಸ್ವಿ ನಾಟಕವನ್ನು ತುಳು ರಂಗಭೂಮಿ ನೀಡಿ ದಾಖಲೆ ಮಾಡಿದೆ. ಅದೇ ರೀತಿ ಓಂಕಾರ ನಾಟಕವು ಪ್ರೇಕ್ಷಕರನ್ನು ರಂಜಿಸಲಿ ಎಂದು ಶುಭ ಹಾರೈಸಿದರು.
ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ರಂಗಭೂಮಿ ಕಲಾವಿದ ನವೀನ್ ಅಳಕೆ, ಉದ್ಯಮಿ ಕೆ.ಶ್ರೀಪತಿ ಭಟ್, ಕೋಟೆಬಾಗಿಲು ಮಹಾಮ್ಮಾಯಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ಕೋಟೆಗಾರ್, ಉದ್ಯಮಿ ನವೀನ್ ಟಿ.ಆರ್, ಕಾಶಿಪಟ್ನ ಗ್ರಾಪಂ ಅಧ್ಯಕ್ಷ ಸತೀಶ್ ಕಾಶಿಪಟ್ನ, ಕ್ರೈಸ್ಟ್ ಕಿಂಗ್ ವಿದ್ಯಾ ಸಂಸ್ಥೆಯ ಮುಖ್ಯಸ್ಥ ರೊಡಲ್ಫ್ ಲೋಬೊ, ನಾಗೇಶ್,
ತಂಡದ ರೂವಾರಿ ಮಣಿ ಕೋಟೆಬಾಗಿಲು ಪ್ರಸ್ತಾವನೆಗೈದು, ಸ್ವಾಗತಿಸಿದರು. ನಿತೇಶ್ ಪೂಜಾರಿ ಮಾರ್ನಾಡ್ ನಿರೂಪಿಸಿದರು.