
ತೆಂಕಮಿಜಾರು ಗ್ರಾ.ಪಂ. ಸದಸ್ಯ ಜೆ.ಕೆ.ಹಸನಬ್ಬ ನಿಧನ
Saturday, August 9, 2025
ಮೂಡುಬಿದಿರೆ: ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ಸದಸ್ಯ, ಮಾಜಿ ಅಧ್ಯಕ್ಷ ಜೆ.ಕೆ.ಹಸನಬ್ಬ ( 56) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ತೆಂಕಮಿಜಾರು ಗ್ರಾಮ ಪಂಚಾಯತ್ ಗೆ ಸತತ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಒಂದು ಅವಧಿಯಲ್ಲಿ ಅಧ್ಯಕ್ಷರಾಗಿದ್ದರು.
ಪರೋಪಕಾರ, ಪಂಚಾತಿಕೆಯಲ್ಲಿ ಮುಂಚೂಣಿಯಲ್ಲಿದ್ದ ಹಸನಬ್ಬ ಅವರು ತೋಡಾರು,ಮೂಡುಬಿದಿರೆ ಪರಿಸರದಲ್ಲಿ ಜನಪ್ರಿಯರಾಗಿದ್ದರು.
ಮಾಜಿ ಸಚಿವ ದಿ.ಅಮರನಾಥ ಶೆಟ್ಟರ ಜೆ.ಡಿ.ಎಸ್.ನಲ್ಲೇ ಅವರು ಗುರುತಿಸಿಕೊಂಡಿದ್ದರು. ತೋಡಾರು ಬಂಗಬೆಟ್ಟು ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು ಸಾಮಾಜಿಕ ಸೇವೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ತಾಯಿ,ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗ, ಮಿತ್ರರನ್ನು ಅಗಲಿದ್ದಾರೆ.