ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟ: ಮಂಗಳೂರು ತಾಲೂಕು ಪ್ರಥಮ
Tuesday, August 26, 2025
ಮೂಡುಬಿದಿರೆ: ರೋಟರಿ ಪದವಿಪೂರ್ವ ಕಾಲೇಜು ಮೂಡಬಿದಿರೆ ಇದರ ನೇತೃತ್ವದಲ್ಲಿ ಸ್ವರಾಜ್ಯ ಮೈದಾನ ದಲ್ಲಿ ಮಂಗಳವಾರ ದ.ಕ. ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟ ನಡೆಯಿತು.
ರೋಟರಿ ಶಿಕ್ಷಣ ಸಂಸ್ಥೆಗಳ ಅದ್ಯಕ್ಷ ರೋ.ನಾರಾಯಣ ಪಿ.ಎಂ ಇವರು ಅಧ್ಯಕ್ಷತೆಯನ್ನು ವಹಿಸಿ ದೀಪ ಬೆಳಗಿಸುವುದರ ಮುಖಾಂತರ ಪಂದ್ಯಾಟವನ್ನು ಉದ್ಘಾಟಿಸಿದರು.
ಮುಖ್ಯ ಆತಿಥಿಗಳಾಗಿ ಮೂಡುಬಿದಿರೆ ಇನ್ನರ್ ವಿಲ್ ಕ್ಲಬ್ ನ ಅಧ್ಯಕ್ಷೆ ಶ್ವೇತಾ ಜೈನ್,ದ.ಕ ಜಿಲ್ಲಾ ಕ್ರೀಡಾ ಸಂಚಾಲಕ ಪ್ರೇಮನಾಥ ಶೆಟ್ಟಿ, ರೋಟರಿ ಆಂಗ್ಲ ಮಾದ್ಯಮ ಶಾಲೆಯ ಸಂಚಾಲಕ ರೋ.ಪ್ರವೀಣ್ ಚಂದ್ರ ಜೈನ್ ,ರೋಟರಿ ಪದವಿಪೂರ್ವ ಕಾಲೇಜಿನ ಸಂಚಾಲಕ ಜೆ.ಡಬ್ಲ್ಯೂ. ಪಿಂಟೋ, ರೋಟರಿ ಕ್ಲಬ್ ಸದಸ್ಯ ನಾಗರಾಜ್, ತಾಲೂಕು ಕ್ರೀಡಾ ಸಂಚಾಲಕ ನವೀನ್ ಹೆಗ್ಡೆ, ಪಂದ್ಯದ ವೀಕ್ಷಕ ಸಫ್ವಾನ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ರವಿ ಕುಮಾರ್ ಸ್ವಾಗತಿಸಿದರು. ಶಹನ್ ರಾಜ್ ಮತ್ತು ಮಾಲತಿ ಕಾರ್ಯಕ್ರಮ ನಿರೂಪಿಸಿದರು. ವೈಶಾಲಿ ವಂದಿಸಿದರು.
ಫಲಿತಾಂಶ:
ಪಂದ್ಯಾಟದಲ್ಲಿ ಮಂಗಳೂರು ತಾಲೂಕು ಪ್ರಥಮ, ಉಳ್ಳಾಲ ತಾಲೂಕು ದ್ವೀತಿಯ ಹಾಗೂ ಮೂಡುಬಿದಿರೆ ತಾಲೂಕು ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
