ತೆಂಕಮಿಜಾರಿನಲ್ಲಿ ಅಪಘಾತ ವಿಮಾ ಪಾಲಿಸಿ ನೋಂದಣಿ ಶಿಬಿರ

ತೆಂಕಮಿಜಾರಿನಲ್ಲಿ ಅಪಘಾತ ವಿಮಾ ಪಾಲಿಸಿ ನೋಂದಣಿ ಶಿಬಿರ


ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ.ಜಾತಿ ಮತ್ತು ಪಂಗಡದ ಬಿಪಿಎಲ್ ಕುಟುಂಬದ ಫಲಾನುಭವಿಗಳಿಗೆ ಪಂಚಾಯತ್ ನ ಶೇ.25 ನಿಧಿಯಿಂದ ಅಪಘಾತ ವಿಮಾ ಪಾಲಿಸಿಯನ್ನು ಮಾಡಿಕೊಡುವ ಬಗ್ಗೆ ನೋಂದಾವಣಿ ಶಿಬಿರವು ಪಂಚಾಯತ್ ಸಭಾಭವನದಲ್ಲಿ ಸೋಮವಾರ ನಡೆಯಿತು. 


ಗ್ರಾಮ ಪಂಚಾಯತ್ ಅಧ್ಯಕ್ಷೆ  ಶಾಲಿನಿ ಕೆ. ಸಾಲಿಯಾನ್ ಇವರು  ನೋಂದಾವಣೆ ಶಿಬಿರಕ್ಕೆ ಚಾಲನೆ ನೀಡಿದರು. ಸದಸ್ಯ ಜಯಲಕ್ಷ್ಮಿ, ಅಂಚೆ ಇಲಾಖೆ ಸಿಬ್ಬಂದಿ ಶಿವಪ್ರಸಾದ್, ಗ್ರಾಮ ಒನ್ ನ ಸುದರ್ಶನ್, ಫಲಾನುಭವಿಗಳು ಹಾಗೂ ಸಿಬ್ಬಂದಿವರ್ಗದವರು ಈ ಸಂದಭ೯ದಲ್ಲಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ  ಸ್ವಾಗತಿಸಿ ಮಾಹಿತಿ ನೀಡಿದರು. ದ್ವಿತೀಯ ದರ್ಜೆ ಸಹಾಯಕ ರಮೇಶ್ ಅವರು ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article