ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ ವಿ.ವಿ. ಜೊತೆ ಕರ್ನಾಟಕ ಸಂಶೋಧನೆ, ಶೈಕ್ಷಣಿಕ ಸಹಯೋಗ

ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ ವಿ.ವಿ. ಜೊತೆ ಕರ್ನಾಟಕ ಸಂಶೋಧನೆ, ಶೈಕ್ಷಣಿಕ ಸಹಯೋಗ


ಬೆಂಗಳೂರು: ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಪುರಾತನ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದೊಂದಿಗೆ ಕರ್ನಾಟಕ ಸರ್ಕಾರದ ಸಂಶೋಧನೆ ಮತ್ತು ಶೈಕ್ಷಣಿಕ ಸಹಯೋಗ ಏರ್ಪಟ್ಟಿದೆ. ಈ ಮೂಲಕ ಕರ್ನಾಟಕ ಸರ್ಕಾರವು ಜಾಗತಿಕ ಶೈಕ್ಷಣಿಕ ವಲಯದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. 

ಇಂಗ್ಲೆಂಡ್‌ನ ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಉತ್ತೇಜಿಸುವ ನಿಟ್ಟಿನಲ್ಲಿ ದೀರ್ಘಾವಧಿಯ ಶೈಕ್ಷಣಿಕ ಸಹಯೋಗವನ್ನು ಘೋಷಿಸಲಾಗಿದೆ. ಈ ಸಹಯೋಗವು ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವುದರೊಂದಿಗೆ, ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ಅಂತರಾಷ್ಟ್ರೀಯ ಮಟ್ಟದ ಜ್ಞಾನ ವಿನಿಮಯ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ಅವಕಾಶಗಳನ್ನು ಒದಗಿಸುವುದೇ ಪ್ರಧಾನ ಉದ್ದೇಶವಾಗಿದೆ.

ಪ್ರೊಫೆಸರ್ ಪ್ರೊ. ರಾಜೀವ್, ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕರಾಗಿರುವ ಪ್ರೊ. ಟೊನ್ನಿ ಇದನ್ನು ಮುನ್ನಡೆಸಲಿದ್ದಾರೆ.  ಸಂಶೋಧನಾ ಸಹಭಾಗಿತ್ವ, ಜ್ಞಾನ ವಿನಿಮಯ ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ಇವು ಸಹಯೋಗದ ಪ್ರಮುಖ ಕ್ಷೇತ್ರಗಳಾಗಿದೆ. ಈ ಮಹತ್ವದ ಉಪಕ್ರಮವನ್ನು ಪರಿಕಲ್ಪನೆಗೊಳಿಸಿ ಮುನ್ನಡೆಸಲು ಪ್ರೊ. ಸುರೇಶ್ ರೇಣುಕಪ್ಪ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಸಹಯೋಗಕ್ಕೆ ಸಚಿವರಾಗಿರುವ ಡಾ. ಎಂ.ಸಿ. ಸುಧಾಕರ್‌, ಡಾ. ಶರಣಪ್ರಕಾಶ್ ಪಾಟೀಲ, ವಿಧಾನ ಪರಿಷತ್‌ ಸದಸ್ಯರಾಗಿರುವ ಡಾ. ಮಂಜುನಾಥ ಭಂಡಾರಿ, ಕುಲಪತಿ ಪ್ರೊ. ಜಯಕರ್, ಕುಲಪ ಪ್ರೊ. ಭಗವಾನ್  ಬೆಂಬಲ ನೀಡಿದ್ದಾರೆ.  ಈ ಸಹಯೋಗವು ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ಅವಕಾಶಗಳನ್ನು, ಅಧ್ಯಾಪಕರಿಗೆ ಅಂತರಾಷ್ಟ್ರೀಯ ಸಂಶೋಧನಾ ವೇದಿಕೆಗಳನ್ನು ಮತ್ತು ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಿಗೆ ಜಾಗತಿಕ ಪ್ರಾಮುಖ್ಯತೆಯನ್ನು ತಂದುಕೊಡಲಿದೆ ಎಂಬ ನಿರೀಕ್ಷೆ ಹುಟ್ಟಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article