‘ಜನಸ್ನೇಹಿಯಾಗಿದ್ದ ಪೊಲೀಸ್ ವ್ಯವಸ್ಥೆಯನ್ನು ಜನದ್ರೋಹಿಯಾಗಿಸಿದ ರಾಜ್ಯ ಸರಕಾರ’: ದಿನೇಶ್ ಶೆಟ್ಟಿ ಕಾವಳಕಟ್ಟೆ ಆಕ್ರೋಶ
ಜಿ.ಪಂ. ಮಾಜಿ ಸದಸ್ಯ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಗುರುವಾರ ಪಿಲತಾಬೆಟ್ಟು ಗ್ರಾ.ಪಂ. ಮುಂಭಾಗ ‘ಸರಕಾರಕ್ಕೆ ಮತಿಯಿಲ್ಲ-ಕಾರ್ಮಿಕರಿಗೆ ಗತಿಯಿಲ್ಲ’, ‘ಭವತಿ ಬಿಕ್ಷಾಂ ದೇಹಿ’ ಎಂಬ ‘ಸ್ಲೋಗನ್ ನಡಿ’ ನಡೆದ ವಿನೂತನರೀತಿಯ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕರಾವಳಿ ಜಿಲ್ಲೆಯಲ್ಲಿನ ಸಂಪ್ರದಾಯ, ಸಂಸ್ಕೃತಿ, ದೈವಾರಾಧನೆ, ನಾಗಮಂಡಲ, ದೇವಸ್ಥಾನದ ಜಾತ್ರೆ, ಉತ್ಸಾವಾದಿಗಳು ಅನಾದಿಕಾಲದಿಂದಲೂ ರಾತ್ರಿ ಹೊತ್ತಿನಲ್ಲಿಯೇ ನಡೆಯುವಂತದ್ದು, ಇದನ್ನು ಅಧಿಕಾರಿಗಳು ಮೊದಲಾಗಿ ಆರ್ಥ ಮಾಡಿಕೊಳ್ಳಬೇಕು, ಕೇವಲ ಟ್ಯಾಕ್ಸ್ ವಸೂಲಿಯಿಂದ ಮಾತ್ರ ಸರಕಾರ ನಡೆಸಲು ಸಾಧ್ಯವಿಲ್ಲ, ದೇವಸ್ಥಾನದ ಹುಂಡಿಯ ಹಣವನ್ನು ಕೂಡ ಬಳಸಲಾಗುತ್ತಿದೆ. ಕೂಲಿ ಕಾರ್ಮಿಕರಿಂದಾಗಿಯೇ ದೇಶದ ಆರ್ಥಿಕ ಸ್ಥಿತಿ ಮೂರನೇ ಸ್ಥಾನಕ್ಕೆ ಬಂದು ನಿಂತಿದೆ ಎಂಬುದು ಗೊತ್ತಿರಲಿ ಎಂದ ಅವರು ಬಡವರ ಮತಪಡೆದು ಆಡಳಿತ ನಡೆಸುವ ಕರ್ನಾಟಕ ಸರಕಾರ ಇದೀಗ ಬಡ ಕೂಲಿಕಾರ್ಮಿಕರನ್ನು ಬೀದಿಗೆ ತಳ್ಳಿ ಮತಿಗೆಟ್ಟವರಂತೆ ವರ್ತಿಸುತ್ತಿದೆ ಎಂದು ಟೀಕಾ ಪ್ರಹಾರಗೈದರು.
ಮಡಂತ್ಯಾರು ಪ್ರಾ.ಕೃ.ಸ. ಸಂಘದ ಅಧ್ಯಕ್ಷ ಜೋಯಲ್ ಮೆಂಡೋನ್ಸ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ, ಕೆಂಪುಕಲ್ಲು, ಮರಳಿನ ಅಭಾವದಿಂದಾಗಿ ಕೂಲಿಕಾರ್ಮಿಕರು ಬೀದಿಗೆ ಬಂದಿದ್ದು, ಸಿದ್ದರಾಮಯ್ಯ ನೇತೃತ್ವದ ದರಿದ್ರ ಸರಕಾರದಿಂದಾಗಿ ವಸತಿ ಸಹಿತ ವಿವಿಧ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿದೆ. ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರ ಜನರ ಜೇಬಿಗೆ ಕತ್ತರಿ ಹಾಕಿ ಲೂಟಿ ಹೊಡೆಯುತ್ತಿದೆ. ಇಂತಹ ಭ್ರಷ್ಟ,ಜನವಿರೋಧಿ ಸರಕಾರವನ್ನು ಕಿತ್ತೊಗೆಯಬೇಕು ಎಂದು ಕಿಡಿಕಾರಿದರು.
ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ ಮಾತನಾಡಿದರು. ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ ಪ್ರಸ್ತಾವನೆಗೈದರು.
ಜಾಥ..
ಇದಕ್ಕು ಮೊದಲು ಪ್ರತಿಭಟನಾಕಾರರು ಮಡಂತ್ಯಾರು ಪೇಟೆಯಿಂದ ಪಿಲಾತಬೆಟ್ಟು ಗ್ರಾಮಪಂಚಾಯತ್ ಕಚೇರಿವರೆಗೆ ಜಾಥದ ಮೂಲಕ ಸಾಗಿ ಬಂದರು. ಬಳಿಕ ಪಿಲಾತಬೆಟ್ಟು ಗ್ರಾ.ಪಂ. ಎದುರು ಪ್ರತಿಭಟನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಕೂಲಿಕಾರ್ಮಿಕರು ಬಟ್ಟಲು ಹಿಡಿದು ಬೀಕ್ಷೆ ಬೇಡಿದರು. ಉಪತಹಶೀಲ್ದಾರ್ ನವೀನ್ ಬೆಂಜನಪದವು ಅವರು ಪ್ರತಿಭಟನಾಕಾರರ ಬಳಿ ಅಗಮಿಸಿ ಮನವಿ ಸ್ವೀಕರಿಸಿದರು.
ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಾರದಾ, ಸದಸ್ಯೆ ಹರ್ಷಿಣಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಹರೀಂದ್ರ ಪೈ, ತಾರಾನಾಥ ಕಜೆಕಾರು, ಪಿ.ಎಂ.ಪ್ರಭಾಕರ, ಮಾಧವ ಬಂಗೇರ,ಪ್ರಶಾಂತ್ ಪುಂಜಾಲಕಟ್ಟೆ, ಶಂಕರ ಶಡಟ್ಟಿ ಬೆದ್ರಮಾರ್, ಚಂದ್ರಶೇಖರಶೆಟ್ಟಿ, ಹನೀಫ್ ಪುಂಜಾಲಕಟ್ಟೆ, ಹರೀಶ್ ಪ್ರಭು, ಪುಷ್ಪಾನಂದ, ಅಬ್ದುಲ್ ರಹಿಮಾನ್, ರಮೇಶ್ ಶೆಟ್ಟಿ ಮಜಲೋಡಿ, ನಾರಾಯಣ ಪೂಜಾರಿ, ಸುಂದರ ನಾಯ್ಕ, ರವಿಶಂಕರ ಹೊಳ್ಳ, ಶೇಖರ ಬದ್ಯಾರು, ಕಾಂತಪ್ಪ ಕರ್ಕೇರ, ದಯಾನಂದ ನಾಯ್ಕ, ಮೆಲ್ವಿನ್ ಕೊರ್ಯ, ಭವಾನಿ ಮಧ್ವ, ದಿನೇಶ್ ಜೇಂಕ್ಯಾರು, ಬೇಬಿರೇಖಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಸರಕಾರದ ವಿರುದ್ಧ ಪ್ರತಿಭಟನಾಕಾರರು ದಿಕ್ಕಾರ ಕೂಗಿದರು.