ಸವಿತಾ ಎಸ್. ರೈ ಅವರಿಗೆ ಪಿಎಚ್‌ಡಿ ಪದವಿ
Saturday, September 6, 2025
ಬಂಟ್ವಾಳ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ವಿಶ್ವವಿದ್ಯಾಲಯವು ಸವಿತಾ ಎಸ್. ರೈ ಅವರಿಗೆ ‘ಸಾಂಸ್ಥಿಕ ಬದ್ಧತೆಯ ನಿರ್ಧಾರಕಗಳು: ನೈತಿಕ ನಾಯಕತ್ವವು ಆಟವನ್ನು ಬದಲಾಯಿಸುವವರೇ?’ ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಪಿಎಚ್‌ಡಿ ಪದವಿ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾಹೆ, ಮಣಿಪಾಲದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಸಹ ಪ್ರಾಧ್ಯಾಪಕ ಡಾ. ನವೀನ್ ಕುಮಾರ್ ಕೂಡಮಾರ ಅವರ ಮಾರ್ಗದರ್ಶನದಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ.
ಸವಿತಾ ಎಸ್ ರೈ ಅವರು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಾಣಿಗುತ್ತು ಸಚಿನ್ ರೈ ಅವರ ಪತ್ನಿ ಮತ್ತು ಶಂಕರ ಎನ್. ಶೆಟ್ಟಿ ತಾಳಿಪಾಡಿ ಮೂಡ್ರಗುತ್ತು ಹಾಗೂ ವಿಜಯ ಎಸ್. ಶೆಟ್ಟಿ ಬೇಳೂರು ದನ್ಯಾಡಿ ಮನೆ ದಂಪತಿಯವರ ಪುತ್ರಿ ಮತ್ತು ಬೈಲುಕೆಳಗಿನಮನೆ ದಿ. ಕೋಚ್ಚಣ್ಣ ರೈ ಹಾಗೂ ಮಾಣಿಗುತ್ತು ಪ್ರಫುಲ್ಲ ಕೆ. ರೈ ಅವರ ಸೊಸೆ.