ಕೋಳಿ ಅಂಕಕ್ಕೆ ದಾಳಿ

ಕೋಳಿ ಅಂಕಕ್ಕೆ ದಾಳಿ

ಬಂಟ್ವಾಳ: ಬಂಟ್ವಾಳ ತಾಲೂಕು ಕೊಡಂಬೆಟ್ಟು ಗ್ರಾಮದ ತಿಮ್ಮೊಟ್ಟು ಎಂಬಲ್ಲಿ ನಡೆಯಿತ್ತಿದ್ದ ಕೋಳಿ ಅಂಕಕ್ಕೆ ಪುಂಜಾಲಕಟ್ಟೆ ಪೊಲೀಸರು ದಾಳಿನಡೆಸಿ ಸ್ಥಳದಲ್ಲಿದ್ದ ಐವರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿಯನ್ವಯ ಪುಂಜಾಲಕಟ್ಟೆ ಪೊಲೀಸರು ಬುಧವಾರ ಸಂಜೆ ಈ ದಾಳಿ ಕಾರ್ಯಾಚರಣೆ ನಡೆಸಿ, ಕೋಳಿ ಅಂಕದ ಸಂದರ್ಭ ಜೂಜಾಟದಲ್ಲಿ ನಿರತರಾಗಿದ್ದ ಐವರನ್ನು ಬಂಧಿಸಿ, 1 ಹುಂಜ ಕೋಳಿ ಹಾಗೂ ಜೂಜಾಟಕ್ಕೆ ಉಪಯೋಗಿಸಿದ 9430 ರೂ. ನಗದನ್ನು ವಶಪಡಿಸಿದ್ದಾರೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article