4 ಕೋ. ರೂ. ಅನುದಾನದಲ್ಲಿ ಮಲ್ಲೂರು ಬದ್ರಿಯಾ ನಗರ ಪಿಡಬ್ಲ್ಯೂಡಿ ರಸ್ತೆ ದುರಸ್ತಿಗೆ ಡಾ. ಭರತ್ ಶೆಟ್ಟಿ ಗುದ್ದಲಿಪೂಜೆ
ಗುದ್ದಲಿಪೂಜೆ ನೆರವೇರಿಸಿ ಡಾ. ಭರತ್ ಶೆಟ್ಟಿ ಮಾತನಾಡಿ, ಈ ಭಾಗದ ನಾಗರಿಕರ ಬಹುದಿನಗಳ ಬೇಡಿಕೆ ಇದಾಗಿದೆ. ನಿರಂತರ ಮಳೆಯಿಂದ ಸುಮಾರು 2.5 ಕಿಮೀ ಅಂತರದಲ್ಲಿ ಹಾನಿಗೀಡಾಗಿದೆ. ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದ್ದು, ಕಾಮಗಾರಿ ವೇಳೆ ಸ್ಥಳೀಯರ ಸಹಕಾರ ಅತ್ಯಗತ್ಯ. ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಮಾಡುವಂತಿಲ್ಲ ಎಂದರು.
ಮಲ್ಲೂರು ಭಾಗದಲ್ಲಿ ಈ ಹಿಂದೆ 4 ಕೋ. ರೂ. ಅಧಿಕ ಅನುದಾನದ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದರೆ, ಮುಂದಿನ ದಿನಗಳಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ದುರಸ್ತಿಯಂತಹ ಇನ್ನೂ ಕೆಲವು ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂದರು.
ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೋಹನ್ ಆಳ್ವ ಸ್ವಾಗತಿಸಿ ಪ್ರಸ್ತಾವಿಸಿದರು. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಮಾ ಎ. ಶೆಟ್ಟಿ, ಅಡ್ಯಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕಮಲಾಕ್ಷ ತಲ್ಲಿಮಾರು, ಮಲ್ಲೂರು ಗ್ರಾಪಂ ಉಪಾಧ್ಯಕ್ಷ ಇಲಿಯಾಸ್, ಮಲ್ಲೂರು ಬಿಜೆಪಿ ಅಧ್ಯಕ್ಷ ದೇವಿಪ್ರಸಾದ್, ಉಳಾಯಿಬೆಟ್ಟು ಗ್ರಾಪಂ ಉಪಾಧ್ಯಕ್ಷ ದಿನೇಶ್ ಬಜಿಲೊಟ್ಟು, ಪ್ರಮುಖರಾದ ಪ್ರದೀಪ್ ನಾಯ್ಕ್ ದೆಮ್ಮಲೆ, ಪಕ್ಷದ ಕಾರ್ಯಕರ್ತರು, ಸ್ಥಳೀಯರು, ಗುತ್ತಿಗೆದಾರ ಅಬ್ದುಲ್ ಖಾದರ್ ಟಿ.ಆರ್. ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.