ಲೇಖನಿ ಕೇವಲ ನಿರ್ಜೀವ ವಸ್ತುವಲ್ಲ ಅದೊಂದು ಭಾವನೆಗಳ ಆಗರ

ಲೇಖನಿ ಕೇವಲ ನಿರ್ಜೀವ ವಸ್ತುವಲ್ಲ ಅದೊಂದು ಭಾವನೆಗಳ ಆಗರ


ಲೇಖನಿ ಶಾಯಿಯನ್ನು ಬಳಸಿಕೊಂಡು ಕಾಗದದ ಮೇಲೆ ಬರೆಯಲು ಸಹಾಯ ಮಾಡುವ ಸಾಧನ. ಅಕ್ಷರಸ್ಥರೆಲ್ಲರಿಗೂ ಲೇಖನಿಯೇ ಜೀವಾಳ. ಆ ಮೂಲಕ ಒಬ್ಬ ವ್ಯಕ್ತಿ ಲೇಖನಿ ಜೊತೆಗೂ ಬಾಂಧವ್ಯ ಬೆಳೆಸಿಕೊಳ್ಳಲು ಸಾಧ್ಯವಿದೆ. ವಿದ್ಯಾರ್ಥಿ, ಶಿಕ್ಷಕ, ಕವಿ ಮತ್ತು ಬರಹಗಾರರೆಲ್ಲರಿಗೂ ಲೇಖನಿ ಅತ್ಯಂತ ಪ್ರಮುಖ ವಸ್ತು. ಇವರೆಲ್ಲರೂ ತಮ್ಮ ಜೇಬಿನಲ್ಲಿ ಲೇಖನಿಯನ್ನಿಟ್ಟುಕೊಂಡೇ ಇರುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಹಾಗೆ ಮಾಡುವುದು ಬುದ್ಧಿವಂತರ ಲಕ್ಷಣ ಎಂದೇ ಗುರುತಿಸಲಾಗುತ್ತಿದ್ದ ಕಾಲವೊಂದಿತ್ತು. ಲೇಖನಿ ಕೇವಲ ಒಂದು ನಿರ್ಜೀವ ವಸ್ತುವಾಗಿ ಕಾಣಿಸಿದರೂ, ವ್ಯಕ್ತಿಯೊಬ್ಬನ ಭಾವನೆ, ದೃಷ್ಟಿಕೋನ ಮತ್ತು ಅಭಿಪ್ರಾಯ ವ್ಯಕ್ತಪಡಿಸಲು ಸಹಾಯ ಮಾಡುವ ಪ್ರಮುಖ ಸಾಧನಗಳಲ್ಲಿ ಒಂದಾಗಿದೆ.  

ಇದು ಭಾವನೆಗಳನ್ನು ಶಾಯಿರೂಪದಲ್ಲಿ ಹಿಡಿದಿಟ್ಟುಕೊಳ್ಳುವ ಮತ್ತು ಅವುಗಳನ್ನು ಕಾಗದದ ಮೇಲೆ ಸುಂದರವಾಗಿ ಚೆಲ್ಲುತ್ತದೆ. ಆಧುನಿಕತೆ ಬೆಳೆದಂತೆ ಲೇಖನಿ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಮೊಬೈಲ್ ತೀವ್ರ ಬಳಕೆಯಿಂದಾಗಿ ಲೇಖನಿಯನ್ನು ಮೂಲೆಗುಂಪು ಮಾಡಲಾಗುತ್ತಿದೆ. ಹಾಗಾಗಿ, ಜನ ಇದರ ಶಕ್ತಿಯನ್ನು ನಿರ್ಲಕ್ಷಿಸುತ್ತಿದ್ದಾರೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಯಾವುದೇ ವ್ಯವಸ್ಥೆಯನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ವಾಸ್ತವವಾಗಿ, ಲೇಖನಿಗೆ ಧ್ವನಿ ಇಲ್ಲ, ಆದರೆ ಇದು ಅನೇಕ ಜನರ ಹೃದಯಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. 

ಬರವಣಿಗೆ ದೀರ್ಘಕಾಲದವರೆಗೆ ವಿಕಸನಗೊಂಡ ಬಳಿಕವೇ ಈಗನ ಸ್ವರೂಪ ಪಡೆದಿದೆ. ನಮ್ಮ ಪೂರ್ವಜರು ಗುಹೆ, ಗೋಡೆಗಳ ಮೇಲೆ ರೇಖಾಚಿತ್ರಗಳನ್ನು ರಚಿಸುವ ಮೂಲಕ ಬರವಣಿಗೆ ಆರಂಭವಾಗುತ್ತದೆ. ಬರವಣಿಗೆ ಇತಿಹಾಸವನ್ನು ಆದಿಮಾನವನಿಂದ ಭಾಷಾ ಬಳಕೆಯ ಬೆಳವಣಿಗೆ ಸಮಯ ಗುರುತಿಸಬಹುದು. ಆ ನಂತರ ಹಕ್ಕಿಗಳ ಪುಕ್ಕ, ಇದ್ದಿಲಿನ ಮೂಲಕ ಬರವಣಿಗೆ ಮಾಡಲಾಗುತ್ತಿತ್ತು. ಆಧುನಿಕತೆ ಬೆಳೆದಂತೆ, ಲೇಖನಿಗಳನ್ನು ಬರವಣಿಗೆ ಉದ್ದೇಶಕ್ಕೆ ವ್ಯಾಪಕವಾಗಿ ಬಳಸಲಾಗುತ್ತಿದೆ. 

ಬರಹಗಾರರು ತಮ್ಮ ಸೃಜನಶೀಲ ವಿಚಾರಗಳನ್ನು ಲೇಖನಿಗಳ ಮೂಲಕ ಸಾರ್ವಜನಿಕರಿಗೆ ತಲುಪಿಸುತ್ತಿದ್ದಾರೆ. ಅನೇಕ ಮಹಾನ್ ಬರಹಗಾರರು ಸಮಾಜದ ಪೂರ್ವಾಗ್ರಹಗಳನ್ನು ಇದೇ ಲೇಖನಿಯ ಸಹಾಯದಿಂದ ಮುರಿದಿದ್ದಾರೆ. ಅಲ್ಲದೇ, ಮಾನವಕುಲದ ಸೇವೆಗಾಗಿ ತಮ್ಮ ಧ್ವನಿ ಎತ್ತಿದ್ದಾರೆ. 

ಹಿಂದೆ ಲೇಖನಿಗಳಲ್ಲಿ ಬರೆದ ವಿಚಾರವೇ ಇಂದಿಗೆ ಇತಿಹಾಸವಾಗಿದೆ. ಆ ಮೂಲಕ ಮಾವನ ಕುಲವನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಲು ಸಾಧ್ಯವಾಗುತ್ತಿದೆ. 

ಆಧುನಿಕ ತಂತ್ರಜ್ಞಾನದ ಪರಿಣಾಮವಾಗಿ, ಲೇಖನಿ ಬಳಕೆ ಕ್ರಮೇಣ ಕಡಿಮೆಯಾಗುತ್ತಿದೆ. ಮೊಬೈಲ್, ಕಂಪ್ಯೂಟರ್ ಸೇರಿದಂತೆ ವಿದ್ಯುನ್ಮಾನ ಸಾಧನಗಳ ಮೂಲಕ ಬೆರಳಚ್ಚು ಮಾಡುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಡಿಜಿಟಲ್ ನೋಟಗಳಿಂದ ಓದುತ್ತಾರೆ, ಯೂಟ್ಯೂಬ್‌ನೊಂದ ಕಲಿಯುತ್ತಾರೆ ಮತ್ತು ಅಗತ್ಯವಿದ್ದಾಗ ಮಾತ್ರ ಬರೆಯುತ್ತಾರೆ. ಆದರೆ ಲೇಖನಿಯಿಂದ ಬರೆಯುವುದರಿಂದ ಅನೇಕ ಪ್ರಯೋಜನಗಳಿವೆ. ಲೇಖನಿಯನ್ನು ಮೂರು ಬೆರಳುಗಳಲ್ಲಿ ಹಿಡಿದಿಟ್ಟುಕೊಳ್ಳುವುದು ಒತ್ತಡದ ಬಿಂದುಗಳಾಗಿವೆ. ಇವು ಎಚ್ಚರವಾಗಿರಲು ಮತ್ತು ಸ್ಪಷ್ಟವಾಗಿ ಯೋಚಿಸಲು ಸಹಾಯ ಮಾಡುತ್ತದೆ ಎಂದು ಹಲವರು ನಂಬುತ್ತಾರೆ. ಕತ್ತಿಗಿಂತ ಲೇಖನಿ ಬಲಶಾಲಿ ಎಂದು ಹೇಳುವುದು ಸತ್ಯ. ಇದು ಬರೆವಣಿಗೆ ಶಕ್ತಿ ಬಗ್ಗೆ ಹೇಳುತ್ತದೆ. ಅಂದರೆ ಲೇಖನಿ ಮೂಲಕ ಕತ್ತಿಗಿಂತ ಹೆಚ್ಚಿನದನ್ನು ಮಾಡಬಹುದು. 



-ಶ್ವೇತಾ, ಪ್ರಥಮ ಬಿಎ 

ಪತ್ರಿಕೋದ್ಯಮ ವಿದ್ಯಾರ್ಥಿ 

ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article