ಪಿಲಿಕುಳದಲ್ಲಿ ಖಗ್ರಾಸ ಚಂದ್ರಗ್ರಹಣ ವೀಕ್ಷಣೆಗೆ ಅವಕಾಶ

ಪಿಲಿಕುಳದಲ್ಲಿ ಖಗ್ರಾಸ ಚಂದ್ರಗ್ರಹಣ ವೀಕ್ಷಣೆಗೆ ಅವಕಾಶ

ಮಂಗಳೂರು: ಸೆ.7 ರಂದು ಖಗ್ರಾಸ ಚಂದ್ರಗ್ರಹಣವು ಸಂಭವಿಸಲಿದೆ. ಅಂದು ರಾತ್ರಿ ಸುಮಾರು 9.57ಕ್ಕೆ ಚಂದ್ರಗ್ರಹಣವು ಆರಂಭವಾಗಲ್ಲಿದ್ದು, ಸುಮಾರು 11 ಗಂಟೆಯಿಂದ ಚಂದ್ರನು ಸಂಪೂರ್ಣವಾಗಿ ಭೂಮಿಯ ಗಾಢ ನೆರಳಿನಲ್ಲಿ ಮರೆಯಾಗುತ್ತಾನೆ. ಈ ಕ್ಷಣದಿಂದ ಮಧ್ಯರಾತ್ರಿ 12.22ರ ವರೆಗೆ (ಸುಮಾರು 1ಗಂಟೆ 22ನಿಮಿಷ) ಖಗ್ರಾಸ ಚಂದ್ರಗ್ರಹಣವನ್ನು ವೀಕ್ಷಿಸಬಹುದು. 

ರಾತ್ರಿ ಸುಮಾರು 1.26ಕ್ಕೆ ಗ್ರಹಣವು ಮುಕ್ತಾಯಗೊಳ್ಳಲಿದ್ದು, ಈ ವಿದ್ಯಮಾನವನ್ನು ಬರಿಗಣ್ಣಿನಿಂದ ನೋಡಬಹುದು. ಈ ಸಮಯದಲ್ಲಿ ಭೂಮಿಯ ವಾತಾವರಣದ ಮೂಲಕ ಹಾದುಹೋಗುವ ಸೂರ್ಯನ ಕಿರಣಗಳ ಚದುರುವಿಕೆಯಿಂದ ಚಂದ್ರನು ತಾಮ್ರದಂತೆ ರಕ್ತವರ್ಣದಲ್ಲಿ ಕಂಡುಬರುತ್ತಾನೆ.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ರಾತ್ರಿ 9 ಗಂಟೆಯಿಂದ ನಡುರಾತ್ರಿ 1.30ರ ವರೆಗೆ ಈ ವಿಶೇಷ ಖಗೋಳ ವಿದ್ಯಮಾನವನ್ನು ವೀಕ್ಷಿಸಲು ದೂರದರ್ಶಕ ಮತ್ತು ದುರ್ಬೀನುಗಳ ವ್ಯವಸ್ಥೆ ಮಾಡಲಾಗಿದೆ, ಇದೇ ಸಂದರ್ಭದಲ್ಲಿ ಕಾಣುವ ಇತರ ಗ್ರಹಗಳು, ನಕ್ಷತ್ರಗಳು ಮತ್ತು ನಕ್ಷತ್ರ ಸಮೂಹಗಳ ಬಗ್ಗೆ ವಿವರಣೆ ನೀಡಲಾಗುವುದು. ಮಳೆ, ಮೋಡಗಳ ಅಡಚಣೆ ಇಲ್ಲದಿದ್ದಲ್ಲಿ ಆಸಕ್ತ ವೀಕ್ಷಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article