ಧರ್ಮಸ್ಥಳ ಪ್ರಕರಣ: ಕೇರಳದ ಸಂಸದರಿಗೆ ಸಂಕಷ್ಟ

ಧರ್ಮಸ್ಥಳ ಪ್ರಕರಣ: ಕೇರಳದ ಸಂಸದರಿಗೆ ಸಂಕಷ್ಟ

ಮಂಗಳೂರು: ದೂರು ನೀಡುವಾಗ ಚಿನ್ನಯ್ಯ ತಂದ ಬುರುಡೆ ವಿಷಯ ಈಗ ಬಹು ಚರ್ಚಿತ. ದೆಹಲಿ ನೋಡಿದ ಬುರುಡೆ ಇದೀಗ ಕೇರಳಕ್ಕೂ ಭೇಟಿ ನೀಡಿರುವುದು ಅಲ್ಲಿಯ ಸಂಸದರೊಬ್ಬರಿಗೆ ಸಂಕಷ್ಟ ತಂದಿದೆ. 

ಬುರುಡೆ ತಂಡವು ಕೇರಳದ ಕಮ್ಯೂನಿಸ್ಟ್ ಪಕ್ಷದಿಂದ ಆಯ್ಕೆಯಾದ ಸಂಸದ ಸಂತೋಷ್ ಕುಮಾರ್‌ರವರನ್ನು ಭೇಟಿ ಮಾಡಿರುವುದು ಬೆಳಕಿಗೆ ಬಂದಿದೆ.  ಆರೋಪಿ ಚಿನ್ನಯ್ಯ, ಗಿರೀಶ್ ಮಟ್ಟೆಣ್ಣನವರ್, ಜಯಂತ್ ತನಿಖೆ ವೇಳೆ ಸಂಸದರನ್ನು ಬುರುಡೆ ಜತೆ ಭೇಟಿ ಮಾಡಿರುವುದು ತಿಳಿಸಿದೆ ಎನ್ನಲಾಗಿದ್ದು, ಪ್ರಕರಣದಲ್ಲಿ ಸಂಸದರ ಪಾತ್ರದ ಕುರಿತಂತೆ ತನಿಖೆಗೆ ಎಸ್‌ಐಟಿ ಮುಂದಾಗಿದ್ದು, ಸಂಸದರನ್ನು ತನಿಖೆಗೆ ಕರೆಯುವ ಸಾಧ್ಯತೆಗಳಿವೆ.

ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಿರುವ 

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ) ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣವರ್, ಜಯಂತ್, ಅಭಿಷೇಕ್, ಸೌಜನ್ಯ ಮಾವ ವಿಠಲ ಗೌಡ ಇವರನ್ನು ಶುಕ್ರವಾರ ತಡರಾತ್ರಿ ವರೆಗೂ ವಿಚಾರಣೆ ನಡೆಸಿದ್ದು, ಇಂದು ಕೂಡಾ ತನಿಖೆ ಮುಂದುವರೆದಿದೆ. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಖುದ್ದು ಗಿರೀಶ್ ಮಟ್ಟಣ್ಣವರ್‌ರ ವಿಚಾರಣೆ ನಡೆಸಿದ್ದಾರೆ. ತಡರಾತ್ರಿ ವರೆಗೆ ವಿಚಾರಣೆ ನಡೆಸಿದ್ದು ಶನಿವಾರ ಅವರು ಬೆಂಗಳೂರಿಗೆ ತೆರಳಿದ್ದಾರೆ. ತನಿಖಾಧಿಕಾರಿ ಜಿತೇಂದ್ರ ದಯಾಮ, ಇನ್‌ಸ್ಪೆಕ್ಟರ್ ಸೈಮನ್ ಮತ್ತಿತರರು ತನಿಖೆ ನಡೆಸುತ್ತಿದ್ದಾರೆ.

ಗೈರು..

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳನಕಾರಿ ವೀಡಿಯೋ ಮಾಡಿರುವ ಕೇರಳದ ಯೂಟ್ಯೂಬರ್ ಮನಾಫ್ ಶನಿವಾರ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿಲ್ಲ. ಸೋಮವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. 

ಸೌಜನ್ಯ ತಾಯಿ ದೂರು..

ಸೌಜನ್ಯ ತಾಯಿ ಧರ್ಮಸ್ಥಳ ಗ್ರಾಮದ ನಿವಾಸಿ ಕುಸುಮಾವತಿ ಅವರು, ತಮ್ಮ ವಿರುದ್ಧ ಹಾಗೂ ತಮ್ಮ ಮಗಳಾದ ಸೌಜನ್ಯಳಿಗೆ ನ್ಯಾಯಕ್ಕಾಗಿ ಹೋರಾಡುವವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮತ್ತು ಮಾನಹಾನಿಕರ ಬರಹಗಳನ್ನು ಪ್ರಕಟಿಸಿರುವ 13 ಖಾತೆಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 79 ಮತ್ತು 296ರ ಅಡಿಯಲ್ಲಿ 13 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಕುಸುಮಾವತಿ ಅವರು ಕಳೆದ 13 ವರ್ಷಗಳಿಂದ ತಮ್ಮ ಮಗಳು ಸೌಜನ್ಯಳ ಸಾವಿಗೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಖಾತೆಗಳು ಕುಸುಮಾವತಿ ಮತ್ತು ಸೌಜನ್ಯ ನ್ಯಾಯಕ್ಕಾಗಿ ಹೋರಾಡುವವರ ಛಾಯಾಚಿತ್ರಗಳನ್ನು ದುರುಪಯೋಗಪಡಿಸಿಕೊಂಡು ಅಶ್ಲೀಲ ಮತ್ತು ಮಾನಹಾನಿಕರ ಬರಹಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿವೆ. ಈ ಕೃತ್ಯಗಳು ಕುಸುಮಾವತಿ ಮತ್ತು ಹೋರಾಟಗಾರರ ಮಾನಪ್ರತಿಷ್ಠೆಗೆ ಧಕ್ಕೆ ತಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article