ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ತಡೆಯಲು ಮೂಡುಮಾನಾ೯ಡಿನಲ್ಲಿ ನಾಗರಿಕರಿಂದ ಸಭೆ
ಕುಂಭಕಂಠಿಣಿ ಮಹಿಳಾ ಬಳಗದ ಪರವಾಗಿ ಶಶಿಕಲಾ ಗಿರೀಶ್ ಅವರು ಮಾತನಾಡಿ ಮಹಿಳೆಯರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ತಿಳಿಸಿ, ಇದೊಂದು ಊರಿನ ಒಳಿತಿಗಾಗಿ ಅತಿ ಅಗತ್ಯವಾದ ಕೆಲಸ ಎಂದರು. ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್, ಸದಸ್ಯರಾದ ಕಲ್ಯಾಣಿ ಪೂಜಾರ್ತಿ, ರಾಜೇಶ್ ಪೂಜಾರಿ ಪೆಂರ್ಕಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ದೇವರಾಜ್ ಸುವರ್ಣ ಪೊಸಲಾಯಿ, ಚೇತನ ಯುವಕ ಮಂಡಲದ ಅಧ್ಯಕ್ಷ ಸುನಿಲ್ ಪೂಜಾರಿ, ವಿಘ್ನೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ರಾಘು ಪೂಜಾರಿ ಜಾರಿಗೆದಡಿ, ಕುಂಭಕಂಠಿನಿ ಮಹಿಳಾ ಬಳಗದ ಉಪಾಧ್ಯಕ್ಷೆ ಜಯಂತಿ ಹರೀಶ್, ಪುದ್ದರ್ ಪ್ರೆಂಡ್ಸ್ ನ ಪ್ರಮುಖರಾದ ಸುದರ್ಶನ್, ಚೇತನ ಯುವಕ ಮಂಡಲದ ಪ್ರಧಾನ ಸಲಹೆಗಾರ ಸುರೇಶ್ ಆಚಾರ್ಯ, ಊರಿನ ಪ್ರಮುಖರಾದ ಪುಂಡಲೀಕ ಭಟ್ ಹುಲ್ಲಜಾಲು, ಶೇಖರ ಪೂಜಾರಿ ಹಿತ್ತಿಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜೇಶ್ ಕುಮಾರ್ ಗೋಳಾರ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸೌಮ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಸಭೆ ಮುಕ್ತಾಯಗೊಂಡ ಬಳಿಕ ಎಲ್ಲರು ಒಟ್ಟಾಗಿ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳಿಗೆ ಭೇಟಿ ನೀಡಿ ತಕ್ಷಣದಿಂದ ಮದ್ಯ ಮಾರಾಟ ನಿಲ್ಲಿಸುವಂತೆ ಮನವಿ ಮಾಡಲಾಯಿತು. ಮತ್ತೆ ಮದ್ಯ ಮಾರಾಟ ಮುಂದುವರೆಸಿದರೆ ಸಂಬಂದಪಟ್ಟ ಇಲಾಖೆಗಳ ನೆರವು ಪಡೆದು ತಮ್ಮ ವಿರುದ್ದ ಕ್ರಮ ಜರಗಿಸಲು ಕಾರ್ಯಪ್ರವ್ರತ್ತರಾಗುತ್ತೇವೆ ಎಂದು ಎಚ್ಚರಿಸಲಾಯಿತು.
