ನೂತನ ಕಡಬ ಪಪಂಗೆ ಅಧ್ಯಕ್ಷರಾಗಿ ತಮನ್ನಾ ಜಬೀನ್

ನೂತನ ಕಡಬ ಪಪಂಗೆ ಅಧ್ಯಕ್ಷರಾಗಿ ತಮನ್ನಾ ಜಬೀನ್

ಪುತ್ತೂರು: ಕಡಬ ತಾಲೂಕಿನ ನೂತನ ಕಡಬ ಪಟ್ಟಣ ಪಂಚಾಯತಿ ಅಧ್ಯಕ್ಷರಾಗಿ ತಮನ್ನಾ ಜಬೀನ್, ಉಪಾಧ್ಯಕ್ಷೆಯಾಗಿ ನೀಲಾವತಿ ಶಿವರಾಮ ಆಯ್ಕೆಯಾಗಿದ್ದಾರೆ.

ಪಟ್ಟಣಪಂಚಾಯತಿಯ 13 ಸ್ಥಾನಗಳಿಗೆ ಆ.17ರಂದು ಚುನಾವಣೆ ನಡೆದಿದ್ದು, ಆ.20ರಂದು ಮತ ಎಣಿಕೆ ಕಾರ್ಯ ನಡೆದು ಸದಸ್ಯರ ಆಯ್ಕೆ ನಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 8 ಸ್ಥಾನ ಹಾಗೂ ಬಿಜೆಪಿಗೆ 5 ಸ್ಥಾನ ಲಭಿಸಿ, ಅಧಿಕಾರ ಕಾಂಗ್ರೆಸ್ ಪಕ್ಷ ಪಡೆದುಕೊಂಡಿತ್ತು.

ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಆ.21ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಈ ಹಿನ್ನಲೆಯಲ್ಲಿ ಅಧಿಕಾರ ಪಡೆದುಕೊಂಡಿರುವ ಕಾಂಗ್ರೆಸ್ ಪಕ್ಷದ ಕಳಾರ ವಾರ್ಡಿನಲ್ಲಿ ಆಯ್ಕೆಯಾದ ತಮನ್ನಾ ಜಬೀನ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಡಬ ವಾರ್ಡಿನಿಂದ ಆಯ್ಕೆಯಾದ ನೀಲಾವತಿ ಶಿವರಾಮ್ ಅವರು ಆಯ್ಕೆಯಾದರು.. ಆಯ್ಕೆ ಪ್ರಕ್ರಿಯೆಯು ಕಡಬ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಕಡಬ ತಾಲೂಕು ತಹಸೀಲ್ದಾರ್ ಅವರ ನೇತೃತ್ವದಲ್ಲಿ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article